ಬಿಜೆಪಿಯಿಂದ ರಾಜ್ಯ ಉಸ್ತುವಾರಿಗಳ ನೇಮಕ

Update: 2024-07-05 16:14 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಬಿಜೆಪಿ ಶುಕ್ರವಾರ ರಾಜ್ಯಗಳಿಗೆ ತನ್ನ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳನ್ನು ನೇಮಕಗೊಳಿಸಿದ್ದು,ಹೆಚ್ಚಿನ ರಾಜ್ಯಗಳಲ್ಲಿ ಹಾಲಿ ಉಸ್ತುವಾರಿಗಳನ್ನೇ ಮುಂದುವರಿಸಿದೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ತಾವ್ಡೆ, ತರುಣ್ ಛುಗ್ ಮತ್ತು ರಾಧಾಮೋಹನ್ ದಾಸ್ ಅಗರವಾಲ್ ಅವರು ಅನುಕ್ರಮವಾಗಿ ಬಿಹಾರ, ಜಮ್ಮು-ಕಾಶ್ಮೀರ ಮತ್ತು ಕರ್ನಾಟಕ ಉಸ್ತುವಾರಿಗಳಾಗಿ ಮುಂದುವರಿಯಲಿದ್ದಾರೆ. ಪ್ರಕಾಶ್ ಜಾವ್ಡೇಕರ್ ಮತ್ತು ಸತೀಶ್ ಪೂನಿಯಾ ಅವರು ಅನುಕ್ರಮವಾಗಿ ಕೇರಳ ಮತ್ತು ಹರ್ಯಾಣಗಳಲ್ಲಿ ಪಕ್ಷದ ಉಸ್ತುವಾರಿಗಳಾಗಲಿದ್ದಾರೆ.

ಛತ್ತೀಸ್ಗಡದಲ್ಲಿ ನಿತಿನ್ ನಬಿನ್,ಗೋವಾದಲ್ಲಿ ಆಶಿಷ್ ಸೂದ್, ಹಿಮಾಚಲ ಪ್ರದೇಶದಲ್ಲಿ ಶ್ರೀಕಾಂತ್ ಶರ್ಮಾ,ಜಾರ್ಖಂಡ್ ನಲ್ಲಿ ಲಕ್ಷ್ಮಿಕಾಂತ್ ಬಾಜಪೈ, ಮಧ್ಯಪ್ರದೇಶದಲ್ಲಿ ಮಹೇಂದ್ರ ಸಿಂಗ್ ಮತ್ತು ಒಡಿಶಾದಲ್ಲಿ ವಿಜಯಪಾಲ್ ಸಿಂಗ್ ತೋಮರ್ ಅವರು ಪಕ್ಷದ ಉಸ್ತುವಾರಿಗಳಾಗಿದ್ದಾರೆ.

ಮಾಜಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಪಂಜಾಬಿನ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತಕುಮಾರ್ ಗೌತಮ್ ಅವರು ಉತ್ತರಾಖಂಡ ಉಸ್ತುವಾರಿಗಳಾಗಿ ಮುಂದುವರಿಯಲಿದ್ದಾರೆ.

ಈಶಾನ್ಯ ರಾಜ್ಯಗಳ ಸಂಯೋಜಕರಾಗಿ ಬಿಜೆಪಿ ಸಂಸದ ಸಂಬಿತ್ ಪಾತ್ರಾ ಅವರನ್ನು ಉಳಿಸಿಕೊಳ್ಳಲಾಗಿದೆ.

ಪಕ್ಷವು ಹೆಚ್ಚಿನ ರಾಜ್ಯಗಳಲ್ಲಿ ಸಹ ಉಸ್ತುವಾರಿಗಳನ್ನೂ ನೇಮಿಸಿದೆ.

ರಾಜ್ಯ ಉಸ್ತುವಾರಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕತ್ವಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ.






 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News