ಎನ್‌ಡಿಎ ಮತ್ತು ಇಂಡಿಯಾ ನಡುವೆ ಮತ್ತೆ ಜಿದ್ದಾಜಿದ್ದಿನ ಹಣಾಹಣಿ; ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ

Update: 2024-07-06 17:43 GMT

PC : PTI 

ಹೊಸ ದಿಲ್ಲಿ: ಹಾಲಿ ಶಾಸಕರ ರಾಜೀನಾಮೆ ಹಾಗೂ ಸಾವಿನಿಂದ ತೆರವಾಗಿರುವ ಪಶ್ಚಿಮ ಬಂಗಾಳ ಸೇರಿದಂತೆ ಏಳು ರಾಜ್ಯಗಳ ಹದಿಮೂರು ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 10ರಂದು ಉಪ ಚುನಾವಣೆಗಳು ನಡೆಯಲಿದೆ. ಈ ಉಪ ಚುನಾವಣೆಗಳಲ್ಲಿ ಮತ್ತೆ ಎನ್‌ಡಿಎ ಮೈತ್ರಿಕೂಟ ಹಾಗೂ ಇಂಡಿಯಾ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಉಪ ಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಹಾರದ ರುಪೌಲಿ, ಪಶ್ಚಿಮ ಬಂಗಾಳದ ರಾಯ್‌ಗಂಜ್, ರಾಣಾಘಾಟ್ ದಕ್ಷಿಣ್, ಬಾಗ್ದಾ ಹಾಗೂ ಮಾನಿಕ್‌ತಾಲಾ, ತಮಿಳುನಾಡಿನ ವಿಕ್ರವಂಡಿ, ಮಧ್ಯಪ್ರದೇಶದ ಅಮರ್ವಾರ, ಉತ್ತರಾಖಂಡದ ಬದ್ರಿನಾಥ್ ಹಾಗೂ ಮಂಗ್ಲೌರ್, ಪಂಜಾಬ್‌ನ ಪಶ್ಚಿಮ ಜಲಂಧರ್ ಹಾಗೂ ದೇಹ್ರಾ, ಹಿಮಾಚಲ ಪ್ರದೇಶದ ಹಮೀರ್‌ಪುರ್ ಹಾಗೂ ನಳಗಢ ಕ್ಷೇತ್ರಗಳು ಸೇರಿವೆ.

ಜುಲೈ 13ರಂದು ಮತ ಎಣಿಕೆ ನಡೆಯಲಿದೆ.

ಕುತೂಹಲಕರ ಸಂಗತಿಯೆಂದರೆ, ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ರಾಜೀನಾಮೆ ನೀಡಿ ಆಡಳಿತಾರೂಢ ಟಿಎಂಸಿ ವತಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿರುವ ಮೂವರು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದ ರಾಯ್‌ಗಂಜ್, ರಾಣಾಘಾಟ್ ದಕ್ಷಿಣ್ ಹಾಗೂ ಬಾಗ್ದಾ ವಿಧಾನಸಭಾ ಕ್ಷೇತ್ರಗಳೂ ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News