ಛತ್ತೀಸ್ ಗಡ: ಟ್ರಕ್ ಮೇಲೆ ಮಾವೋವಾದಿಗಳ ದಾಳಿ | ಇಬ್ಬರು ಯೋಧರ ಸಾವು

Update: 2024-06-23 12:27 GMT

PC ; NDTV

ರಾಯ್ಪುರ : ಛತ್ತೀಸ್ ಗಡದ ಸುಕ್ಮಾದಲ್ಲಿ ಪ್ಯಾರಮಿಲಿಟರಿ ಯೋಧರು ಸಂಚರಿಸುತ್ತಿದ್ದ ಟ್ರಕ್ ಮೇಲೆ ಮಾವೋವಾದಿಗಳು ನಡೆಸಿದ ದಾಳಿಯಲ್ಲಿ, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.

ಮಾವೋವಾದಿಗಳು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಗಳನ್ನು ಹುದುಗಿಸಿಟ್ಟು ಯೋಧರ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಯೋಧರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ವಿಶೇಷ ಮಾವೋವಾದಿ ವಿರೋಧಿ ಘಟಕ ಕೋಬ್ರಾಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಐಇಡಿ ದಾಳಿ ನಡೆದಾಗ ಅವರು ರಸ್ತೆ ತೆರೆಯುವ ಗಸ್ತು (ಆರ್‌ಒಪಿ) ಭಾಗವಾಗಿ ಟ್ರಕ್ ಮತ್ತು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಹೆಚ್ಚಿನ ಭದ್ರತಾ ಪಡೆಗಳು ಪ್ರದೇಶವನ್ನು ತಲುಪಿದ್ದು, ಮಾವೋವಾದಿಗಳಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News