ಮಾನನಷ್ಟ ಪ್ರಕರಣ: ಹೋರಾಟಗಾರ್ತಿ ಮೇಧಾ ಪಾಟ್ಕರ್‌ಗೆ 5 ತಿಂಗಳ ಸಜೆ ವಿಧಿಸಿದ ದಿಲ್ಲಿ ಕೋರ್ಟ್‌

Update: 2024-07-01 12:25 GMT

ಮೇಧಾ ಪಾಟ್ಕರ್‌ | PTI

ಹೊಸದಿಲ್ಲಿ: ಮಾನನಷ್ಟ ಪ್ರಕರಣವೊಂದರಲ್ಲಿ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಅವರಿಗೆ ದಿಲ್ಲಿಯ ನ್ಯಾಯಾಲಯವೊಂದು ಇಂದು ಐದು ತಿಂಗಳ ಸರಳ ಸಜೆ ವಿಧಿಸಿದೆ. ಸುಮಾರು 23 ವರ್ಷ ಹಳೆಯ ಪ್ರಕರಣ ಇದಾಗಿದೆ. ದಿಲ್ಲಿಯ ಈಗಿನ ಲೆಫ್ಟಿನೆಂಟ್‌ ಗವರ್ನರ್‌ ಅವರು ಈ ಹಿಂದೆ ಎನ್‌ಜಿಒ ನ್ಯಾಷನಲ್‌ ಕೌನ್ಸಿಲ್‌ ಆಫ್‌ ಸಿವಿಲ್‌ ಲಿಬರ್ಟೀಸ್‌ ಅಧ್ಯಕ್ಷರಾಗಿದ್ದ ವೇಳೆ ಪಾಟ್ಕರ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಮೇಧಾ ಪಾಟ್ಕರ್‌ ತಪ್ಪಿತಸ್ಥರು, ಸಕ್ಸೇನಾ ಅವರ ಮಾನಹಾನಿಗೈದಿದ್ದಕ್ಕಾಗಿ ಅವರಿಗೆ ರೂ 10 ಲಕ್ಷ ಪರಿಹಾರ ಕೂಡ ಒದಗಿಸಬೇಕೆಂದು ಮೆಟ್ರಿಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರಾಘವ್‌ ಶರ್ಮ್‌ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಆದರೆ ಮೇಧಾ ಅವರಿಗೆ ಕೋರ್ಟಿನ ಆದೇಶದ ವಿರುದ್ಧ ಅಪೀಲು ಸಲ್ಲಿಸಲು ಅವಕಾಶ ನೀಡಲು ಅವರ ಜೈಲು ಶಿಕ್ಷೆಯನ್ನು ಆಗಸ್ಟ್‌ 1ರ ತನಕ ಅಮಾನತಿನಲ್ಲಿ ಕೋರ್ಟ್‌ ಇರಿಸಿದೆ.

ನ್ಯಾಯಾಲಯದ ಆದೇಶದ ಕುರಿತು ಪ್ರತಿಕ್ರಿಯಿಸಿದ ಮೇಧಾ ಪಾಟ್ಕರ್‌, “ಸತ್ಯವನ್ನು ಯಾವತ್ತೂ ಸೋಲಿಸಲಾಗದು. ನಾವು ಯಾರ ಮಾನಹಾನಿಯನ್ನೂ ಮಾಡಿಲ್ಲ. ನಾವು ನಮ್ಮ ಕೆಲಸವನ್ನಷ್ಟೇ ಮಾಡುತ್ತೇವೆ. ಕೋರ್ಟ್‌ ತೀರ್ಪನ್ನು ಪ್ರಶ್ನಿಸಲಾಗುವುದು,” ಎಂದಿದ್ದಾರೆ.

ತಮ್ಮ ವಿರುದ್ಧ ಹಾಗೂ ತಮ್ಮ ನರ್ಮದಾ ಬಚಾವೋ ಆಂದೋಲನದ ವಿರುದ್ಧ ಜಾಹೀರಾತುಗಳನ್ನು ಸಕ್ಸೇನಾ ಪ್ರಕಟಿಸಿದ ನಂತರ ಇಬ್ಬರೂ 2000ರಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಪಾಟ್ಕರ್‌ ಅವರು ನವೆಂಬರ್‌ 2000 ರಲ್ಲಿ “ಟ್ರೂ ಫೇಸ್‌ ಆಫ್‌ ಪೇಟ್ರಿಯಟ್” ಎಂಬ ಶೀರ್ಷಿಕೆಯ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದರು. ಇದರಲ್ಲಿ ಸುಳ್ಳು ಹೇಳಿಕೆಗಳಿದ್ದವು ಹಾಗೂ ಸಕ್ಸೇನಾ ಅವರ ಮಾನಹಾನಿಗೈಯ್ಯುವ ಉದ್ದೇಶ ಅದಕ್ಕಿತ್ತು ಎಂದು ಆರೋಪಿಸಲಾಗಿತ್ತು.

ಆ ಸಮಯದಲ್ಲಿ ಅಹ್ಮದಾಬಾದ್‌ ಮೂಲದ ಎನ್‌ಜಿಒ ಅಧ್ಯಕ್ಷರಾಗಿದ್ದ ಸಕ್ಸೇನಾ ಪಾಟ್ಕರ್‌ ವಿರುದ್ಧ 2001ರಲ್ಲಿ ಎರಡು ಪ್ರಕರಣ ದಾಖಲಿಸಿದ್ದರು. ತಮ್ಮ ವಿರುದ್ಧ ಆಖೆ ಟಿವಿ ವಾಹಿನಿಯಲ್ಲಿ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಹಾಗೂ ಮಾನಹಾನಿಕರ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದ್ದರು ಎಂದು ಸಕ್ಸೇನಾ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News