ಉ.ಪ್ರ:ಆ್ಯಂಬುಲೆನ್ಸ್ ಸಿಗದೇ ಟೈಫಾಯ್ಡ್ ನಿಂದ ಮೃತ ಸೋದರಿಯನ್ನು ಹೊತ್ತುಕೊಂಡೇ ಸಾಗಿದ ವ್ಯಕ್ತಿ
ಲಖಿಂಪುರ ಖೇರಿ: ರಾಜ್ಯದ ಹಲವಾರು ಭಾಗಗಳಲ್ಲಿ ನೆರೆ ಹಾವಳಿಯಿಂದಾಗಿ ಸಕಾಲದಲ್ಲಿ ವೈದ್ಯಕೀಯ ನೆರವು ಲಭಿಸದೆ ಹದಿಹರೆಯದ ಬಾಲಕಿಯೋರ್ವಳು ಮೃತಪಟ್ಟ ದುರಂತ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಆಕೆಯ ಹತಾಶ ಸೋದರ ಆ್ಯಂಬುಲೆನ್ಸ್ ಸಿಗದೆ ಸೋದರಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಶಿವಾನಿ ಟೈಫಾಯ್ಡ್ನಿಂದ ಬಳಲುತ್ತಿದ್ದು,ಅದು ಉಲ್ಬಣಗೊಂಡಿತ್ತು. ಸೋದರ ತಂಗಿಯನ್ನು ನಗರದ ಉತ್ತಮ ವೈದ್ಯರ ಬಳಿ ಕರೆದೊಯ್ಯಲು ಪ್ರಯತ್ನಿಸಿದ್ದನಾದರೂ ನೆರೆಯಿಂದಾಗಿ ಅದು ಸಾಧ್ಯವಾಗದೆ ದಾರಿ ಮಧ್ಯೆಯೇ ಆಕೆ ಕೊನೆಯುಸಿರೆಳೆದಿದ್ದಳು.
The picture from Lakhimpur Kheri district in Uttar Pradesh is heart-wrenching.
— Sneha Mordani (@snehamordani) July 12, 2024
Shivani was suffering from typhoid. Due to the floods, she could not be taken to a good doctor in the city. She died on the way. Her brother is carrying his sister's dead body on his shoulder...
It… pic.twitter.com/E4FmIXrKhr
ಕಳೆದ ಕೆಲವು ದಿನಗಳಿಂದ ಪ್ರದೇಶದಲ್ಲಿ ನಿರಂತರಗಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಆ್ಯಂಬುಲೆನ್ಸ್ ಲಭ್ಯವಿರಲಿಲ್ಲ. ಹೀಗಾಗಿ ಆತ ಶಿವಾನಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಗೆ ಸಾಗಿದ್ದು,ಇದು ವ್ಯವಸ್ಥೆಯ ಕಟು ವಾಸ್ತವತೆಯನ್ನು ಬಿಂಬಿಸಿದೆ. ಅಗತ್ಯವುಳ್ಳ ರೋಗಿಗಳಿಗೆ ಸೂಕ್ತ ವೈದ್ಯಕೀಯ ನೆರವು ಸಿಗದ ಇಂತಹ ದುರಂತ ಘಟನೆಗಳು ಪ್ರತಿ ವರ್ಷ ಸಾಮಾನ್ಯ ವಿದ್ಯಮಾನವಾಗಿರುವ ನೆರೆಯಂತಹ ಪರಿಸ್ಥಿತಿಗಳಲ್ಲಿ ಆಡಳಿತದ ಸನ್ನದ್ಧತೆಗೆ ಸವಾಲು ಹಾಕುತ್ತಿವೆ.