ಹೊಸದಿಲ್ಲಿ : “ಜನಾದೇಶವು ಪ್ರಧಾನಿ ಮೋದಿಯ ವಿರುದ್ಧವಾಗಿದೆ. ಫಲಿತಾಂಶವು ಅವರಿಗೆ ನೈತಿಕವಾಗಿ ಸೋಲು ನೀಡಿದ್ದು, ಜನರು ಮೋದಿಯನ್ನು ತಿರಸ್ಕರಿಸಿದ್ದಾರೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ದಿಲ್ಲಿಯ ತಮ್ಮ ನಿವಾಸದಲ್ಲಿ ಆಯೋಜಿಸಿರುವ INDIA ಒಕ್ಕೂಟದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಚುನಾವಣೆಯಲ್ಲಿ ಮೈತ್ರಿಕೂಟದ ಸದಸ್ಯರು ಉತ್ತಮವಾಗಿ ಹೋರಾಡಿದ್ದೇವೆ. ನಮ್ಮ ಒಗ್ಗಟ್ಟು, ಧೃಡತೆ ಕೆಲಸ ಮಾಡಿದೆ” ಎಂದು ಅವರು ಸಭೆಯಲ್ಲಿ ತಿಳಿಸಿದ್ದಾರೆ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಅದರ ಅನೇಕ ನಿಬಂಧನೆಗಳಿಗೆ ಬದ್ಧತೆಯಿರುವ ಎಲ್ಲಾ ಪಕ್ಷಗಳನ್ನು INDIA ಮೈತ್ರಿಕೂಟವು ಸ್ವಾಗತಿಸುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಘೋಷಿಸಿದರು.