ಐಪಿಎಲ್‌ನ ಅತಿ ದುಬಾರಿ ಆಟಗಾರರು ಯಾರ‍್ಯಾರು?
ಚೆನ್ನೈ : 2025ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಆಟಗಾರರ ಹರಾಜು ಸೌದಿ ಅರೇಬಿಯದ ಜಿದ್ದಾದಲ್ಲಿ ನವೆಂಬರ್ 24 ಮತ್ತು 25ರಂದು ನಡೆಯಲಿದೆ. ಹರಾಜು ಭಾರತದಿಂದ ಹೊರಗೆ ನಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2024ರ ಋತುವಿನ ಹರಾಜು ದುಬೈಯಲ್ಲಿ 2024ರಲ್ಲಿ ನಡೆದಿತ್ತು.
ಈವರೆಗಿನ ಐಪಿಎಲ್ ಹರಾಜುಗಳಲ್ಲಿ ಅತಿ ಹೆಚ್ಚಿನ ಬೆಲೆಗೆ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ:
1. 2008: ಮಹೇಂದ್ರ ಸಿಂಗ್ ಧೋನಿ (ಚೆನ್ನೈ ಸೂಪರ್ ಕಿಂಗ್ಸ್) - 9.5 ಕೋಟಿ ರೂ.
2. 2009: ಕೆವಿನ್ ಪೀಟರ್‌ಸನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಮತ್ತು ಆ್ಯಂಡ್ರೂ ಫ್ಲಿಂಟಾಫ್ (ಚೆನ್ನೈ ಸೂಪರ್ ಕಿಂಗ್ಸ್)- 9.8 ಕೋಟಿ ರೂ.
3. 2010: ಶೇನ್ ಬಾಂಡ್ (ಕೋಲ್ಕತ ನೈಟ್‌ರೈಡರ್ಸ್) ಮತ್ತು ಕೀರನ್ ಪೊಲಾರ್ಡ್ (ಮುಂಬೈ ಇಂಡಿಯನ್ಸ್)- 4.8 ಕೋಟಿ ರೂ.
4. 2011: ಗೌತಮ್ ಗಂಭೀರ್ (ಕೋಲ್ಕತ ನೈಟ್ ರೈಡರ್ಸ್)- 14.9 ಕೋಟಿ ರೂ.
5. 2012: ರವೀಂದ್ರ ಜಡೇಜ (ಚೆನ್ನೈ ಸೂಪರ್ ಕಿಂಗ್ಸ್)- 12.8 ಕೋಟಿ ರೂ.
6. 2013: ಗ್ಲೆನ್ ಮ್ಯಾಕ್ಸ್‌ವೆಲ್ (ಮುಂಬೈ ಇಂಡಿಯನ್ಸ್)- 6.3 ಕೋಟಿ ರೂ.
7. 2014: ಯುವರಾಜ್ ಸಿಂಗ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)- 14 ಕೋಟಿ ರೂ.
8. 2015: ಯುವರಾಜ್ ಸಿಂಗ್ (ಡೆಲ್ಲಿ ಡೇರ್‌ಡೆವಿಲ್ಸ್)- 16 ಕೋಟಿ ರೂ.
9. 2016: ಶೇನ್ ವಾಟ್ಸನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)- 9.5 ಕೋಟಿ ರೂ.
10. 2017: ಬೆನ್ ಸ್ಟೋಕ್ಸ್ (ರೈಸಿಂಗ್ ಪುಣೆ ಸೂಪರ್‌ಜಯಂಟ್)- 14.5 ಕೋಟಿ ರೂ.
11. 2018: ಬೆನ್ ಸ್ಟೋಕ್ಸ್ (ರಾಜಸ್ಥಾನ ರಾಯಲ್ಸ್)- 12.5 ಕೋಟಿ ರೂ.
12. 2019: ಜಯದೇವ್ ಉನಾದ್ಕಟ್ (ರಾಜಸ್ಥಾನ ರಾಯಲ್ಸ್), ವರುಣ್ ಚಕ್ರವರ್ತಿ (ಕಿಂಗ್ಸ್ ಇಲೆವೆನ್ ಪಂಜಾಬ್)- 8.4 ಕೋಟಿ ರೂ.
13. 2020: ಪ್ಯಾಟ್ ಕಮಿನ್ಸ್ (ಕೋಲ್ಕತ ನೈಟ್ ರೈಡರ್ಸ್)- 15.5 ಕೋಟಿ ರೂ.
14. 2021: ಕ್ರಿಸ್ ಮೊರಿಸ್ (ರಾಜಸ್ಥಾನ ರಾಯಲ್ಸ್)- 16.25 ಕೋಟಿ ರೂ.
15. 2022: ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್)- 15.25 ಕೋಟಿ ರೂ.
16. 2023: ಸ್ಯಾಮ್ ಕರನ್ (ಪಂಜಾಬ್ ಕಿಂಗ್ಸ್)- 18.5 ಕೋಟಿ ರೂ.
17. 2024: ಮಿಚೆಲ್ ಸ್ಟಾರ್ಕ್ (ಕೋಲ್ಕತ ನೈಟ್ ರೈಡರ್ಸ್)- 24.75 ಕೋಟಿ ರೂ.