ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ಗೆ ಭಾರತೀಯ ತಂಡ ಪ್ರಕಟ

Update: 2024-12-24 21:55 IST
Indian team celebration

PC : PTI 

  • whatsapp icon

ಮುಂಬೈ : ಐಸಿಸಿ ಮಹಿಳೆಯರ ಅಂಡರ್-19 ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತೀಯ ಕ್ರಿಕೆಟ್ ತಂಡದ ನೇತೃತ್ವವನ್ನು ನಿಕಿ ಪ್ರಸಾದ್ ವಹಿಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿದೆ. ಪಂದ್ಯಾವಳಿಯು ಮಲೇಶ್ಯದ ಕೌಲಾಲಂಪುರದಲ್ಲಿ ಜನವರಿ 18ರಂದು ಆರಂಭಗೊಳ್ಳಲಿದೆ.

ಕನ್ನಡತಿ ನಿಕಿ ಪ್ರಸಾದ್ ಬಳಗವು ಇತ್ತೀಚೆಗೆ ಚೊಚ್ಚಲ ಐಸಿಸಿ ಅಂಡರ್-19 ಮಹಿಳೆಯರ ಏಶ್ಯ ಕಪ್ 2024 ಪಂದ್ಯಾವಳಿಯನ್ನು ಗೆದ್ದಿದೆ. ಕೌಲಾಲಂಪುರದ ಲ್ಲಿ ರವಿವಾರ ನಡೆದ ಫೈನಲ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ಸೋಲಿಸಿದೆ.

ಅಂಡರ್-19 ಟಿ20 ವಿಶ್ವಕಪ್‌ನಲ್ಲಿ, ಹಾಲಿ ಚಾಂಪಿಯನ್ ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎ ಗುಂಪಿನಲ್ಲಿರುವ ಇತರ ತಂಡಗಳೆಂದರೆ ಮಲೇಶ್ಯ, ವೆಸ್ಟ್‌ಇಂಡೀಸ್ ಮತ್ತು ಶ್ರೀಲಂಕಾ. ಭಾರತವು ತನ್ನ ಮೊದಲ ಪಂದ್ಯವನ್ನು ಜನವರಿ 19ರಂದು ವೆಸ್ಟ್‌ಇಂಡೀಸ್ ವಿರುದ್ಧ ಆಡಲಿದೆ.

ಪಂದ್ಯಾವಳಿಯಲ್ಲಿ ಎರಡು ಗುಂಪುಗಳಿವೆ. ಪ್ರತಿ ಗುಂಪಿನ ಮೂರು ಅಗ್ರ ತಂಡಗಳು ಸೂಪರ್-ಸಿಕ್ಸ್ ಹಂತ ತಲುಪುತ್ತವೆ. ಬಳಿಕ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ಜನವರಿ 31ರಂದು ನಡೆಯಲಿದೆ.

*ಭಾರತದ ಅಂಡರ್-19 ಮಹಿಳಾ ತಂಡ

ನಿಕಿ ಪ್ರಸಾದ್ (ನಾಯಕಿ), ಸನಿಕಾ ಚಲ್ಕೆ (ಉಪನಾಯಕಿ), ಜಿ. ತೃಷಾ, ಕಮಲಿನಿ ಜಿ (ವಿಕೆಟ್‌ಕೀಪರ್), ಭವಿಕಾ ಅಹಿರೆ (ವಿಕೆಟ್‌ಕೀಪರ್), ಈಶ್ವರಿ ಅವಸರೆ, ಮಿಥಿಲಾ ವಿನೋದ್, ಜೋಶಿತಾ ವಿ.ಜೆ., ಸೋನಮ್ ಯಾದವ್, ಪರುನಿಕಾ ಸಿಸೋಡಿಯ, ಕೇಸರಿ ದೃತಿ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಎಮ್.ಡಿ. ಶಬ್ನಮ್ ಮತ್ತು ವೈಷ್ಣವಿ ಎಸ್.

ಬದಲಿ ಆಟಗಾರರು: ನಂದನಾ ಎಸ್, ಇರಾ ಜೆ ಮತ್ತು ಅನದಿ ಟಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News