ಮಣಿಪುರ | ಜಿರಿಬಾಮ್ ಗುಂಡಿನ ಚಕಮಕಿಯಲ್ಲಿ ಮೃತರಿಗೆ ನ್ಯಾಯಕ್ಕೆ ಆಗ್ರಹಿಸಿ ಖಾಲಿ ಶವಪೆಟ್ಟಿಗೆಯೊಂದಿಗೆ ಮೆರವಣಿಗೆ

Update: 2024-11-19 13:50 GMT

PC  : PTI

ಮಣಿಪುರ: ಜಿರಿಬಾಮ್ ನಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೃತ ನಾಗರಿಕರಿಗೆ ನ್ಯಾಯಕ್ಕೆ ಒತ್ತಾಯಿಸಿ ಚುರಾಚಂದ್ಪುರ ಜಿಲ್ಲೆಯಲ್ಲಿ ಮಂಗಳವಾರ ನೂರಾರು ಜನರು ಖಾಲಿ ಶವಪೆಟ್ಟಿಗೆಯೊಂದಿಗೆ ಮೆರವಣಿಗೆ ನಡೆಸಿದ್ದಾರೆ.

ಜಾಯಿಂಟ್ ಫಿಲಾಂತ್ರೊಪಿಕ್ ಆರ್ಗನೈಸೇಶನ್ (Joint Philanthropic Organisation)(ಜೆಪಿಒ) ಆಯೋಜಿಸಿದ್ದ ರ‍್ಯಾಲಿಯು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿತ್ತು. ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಮೃತರಿಗೆ ನ್ಯಾಯ ಒದಗಿಸಿ ಗುಡ್ಡಗಾಡು ಪ್ರದೇಶದಲ್ಲಿ ಪ್ರತ್ಯೇಕ ಆಡಳಿತ ವ್ಯವಸ್ಥೆಗೆ ಆಗ್ರಹಿಸಿ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದ್ದಾರೆ.

ಕಳೆದ ಮೇ ತಿಂಗಳಿನಿಂದ ಹಿಂಸಾಚಾರದಲ್ಲಿ ಮೃತಪಟ್ಟ ಕುಕಿ ಸಮುದಾಯದವರನ್ನು ಸಮಾಧಿ ಮಾಡಿದ ‘ನೆನಪಿನ ಗೋಡೆ’ಯ ಬಳಿ ಜೆಪಿಒ ಹಮ್ಮಿಕೊಂಡಿದ್ದ ಮೆರವಣಿಗೆ ಅಂತ್ಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಜಿಲ್ಲಾಡಳಿತದ ಮೂಲಕ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಮಣಿಪುರ ಪೋಲಿಸರ ಪ್ರಕಾರ, ಕಳೆದ ವಾರ ಭದ್ರತಾ ಪಡೆಗಳೊಂದಿಗೆ ನಡೆಸಿದ ಗುಂಡಿನ ಚಕಮಕಿಯಲ್ಲಿ ಹತ್ತು ಮಂದಿ ಮೃತಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News