ಪ್ರಾಣಪ್ರತಿಷ್ಠೆ ವೇಳೆ ಹೃದಯಾಘಾತಕ್ಕೀಡಾದ ಭಕ್ತನ ಜೀವ ಉಳಿಸಿದ ವಾಯುಪಡೆ!

Update: 2024-01-23 05:00 GMT

Photo: twitter.com/narendramodi

Air force saved the life of a devotee who suffered a heart attack during Pranapratistha!ಹೊಸದಿಲ್ಲಿ: ಭಾರತೀಯ ವಾಯುಪಡೆಯ ತುರ್ತುಸ್ಪಂದನೆ ತಂಡದ ಸಂಚಾರಿ ಆಸ್ಪತ್ರೆ, ಅಯೋಧ್ಯೆಯಲ್ಲಿ ಸೋಮವಾರ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ವೇಳೆ ಹೃದಯಾಘಾತಕ್ಕೀಡಾದ ಭಕ್ತರೊಬ್ಬರ ಜೀವ ಉಳಿಸಿದ ಘಟನೆ ನಡೆಯಿತು.

ರಾಮಕೃಷ್ಣ ಶ್ರೀವಾಸ್ತವ ಎಂಬ ಭಕ್ತರೊಬ್ಬರು ದೇಗುಲ ಸಂಕೀರ್ಣದ ಒಳಗಡೆ ಹೃದಯಾಘಾತದಿಂದ ಕುಸಿದು ಬಿದ್ದರು. ವಿಂಗ್ ಕಮಾಂಡರ್ ಮನೀಶ್ ಗುಪ್ತ ನೇತೃತ್ವದ ಬಿಎಚ್ಐಎಸ್ಎಚ್ಎಂ ಕ್ಯೂಬ್ ತಂಡ ತಕ್ಷಣ ಅವರನ್ನು ಕರೆದೊಯ್ದು ಚಿಕಿತ್ಸೆ ನೀಡಿ, ಅವರ ಪ್ರಾಣರಕ್ಷಣೆ ಮಾಡಿತು ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ವೈದ್ಯರು ತಪಾಸಣೆ ನಡೆಸಿದಾಗ ಶ್ರೀವಾಸ್ತವ ಅವರ ರಕ್ತದೊತ್ತಡ ಮಟ್ಟ ಅಪಾಯಕಾರಿ ಎನಿಸುವಷ್ಟು ಹೆಚ್ಚಿತ್ತು ಎಂದು ಹೇಳಲಾಗಿದೆ. ಕ್ಷಿಪ್ರ ಸ್ಪಂದನೆ ತಂಡ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿತು. ರೋಗಿಯ ಆರೋಗ್ಯಸ್ಥಿತಿ ಸ್ಥಿರವಾದಾಗ, ಹೆಚ್ಚಿನ ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮೂಲಗಳು ಹೇಳಿವೆ.

ಆರೋಗ್ಯ ಮೈತ್ರಿ ವಿಕೋಪ ನಿರ್ವಹಣೆ ಯೋಜನೆಯಡಿ ಕಾರ್ಯನಿರ್ವಹಿಸುವ ಎರಡು ಕ್ಯೂಬ್-ಬಿಎಚ್ಐಎಸ್ ಎಚ್ಎಂ ಮೊಬೈಲ್ ಆಸ್ಪತ್ರೆಗಳನ್ನು ಅಯೋಧ್ಯೆಯಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ನಿಯೋಜಿಸಲಾಗಿತ್ತು. ಈ ಮೊಬೈಲ್ ಆಸ್ಪತ್ರೆಗಳಿಗೆ ವಿಕೋಪ ಸ್ಪಂದನೆಗೆ ಮತ್ತು ತುರ್ತು ಆರೋಗ್ಯ ಸ್ಥಿತಿ ನಿಭಾಯಿಸಲು ಅಗತ್ಯ ಎನಿಸಿದ ಹಲವು ವಿನೂತನ ಸಾಧನಗಳನ್ನು ನೀಡಲಾಗಿತ್ತು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News