ಆಂಧ್ರ ಪ್ರದೇಶ: 2 ಚಿರತೆಗಳ ಸಂಶಯಾಸ್ಪದ ಸಾವು

Update: 2023-08-17 17:30 GMT

ವಿಜಯವಾಡ: ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ಮೆಲವೊಯಿ ಗ್ರಾಮದ ಸಮೀಪ ಎರಡು ದಿನಗಳ ಅಂತರದಲ್ಲಿ ಎರಡು ಚಿರತೆಗಳು ಸಂಶಯಾಸ್ಪದವಾಗಿ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಮೊದಲು ಹೆಣ್ಣು ಚಿರತೆಯ ಕಳೇಬರವು ಬುಧವಾರ ಸಂಜೆ ಮೀಸಲು ಅರಣ್ಯ ಪ್ರದೇಶವೊಂದರ ಹೊರಗಿನ ಕೃಷಿ ಹೊಲವೊಂದರಲ್ಲಿ ಪತ್ತೆಯಾಯಿತು. ಅದರ ಬಾಯಿಯಿಂದ ನೊರೆ ಬರುತ್ತಿತ್ತು ಮತ್ತು ಮೂಗಿನಿಂದ ರಕ್ತ ಸುರಿಯುತ್ತಿತ್ತು.

‘‘ಮೊದಲ ಚಿರತೆಯ ಕಳೇಬರದ ಸುತ್ತಲಿನ ಪ್ರದೇಶವನ್ನು ಗುರುವಾರ ಬೆಳಗ್ಗೆ ಪರಿಶೀಲನೆ ನಡೆಸುತ್ತಿದ್ದಾಗ, ಇನ್ನೊಂದು ಚಿರತೆ (ಗಂಡು)ಯ ಕಳೇಬರವು ಗುಡ್ಡವೊಂದರಲ್ಲಿ ಪತ್ತೆಯಾಯಿತು. ಅದರ ಜೊತೆಗೆ ಆಡೊಂದರ ಕಳೇಬರವೂ ಪತ್ತೆಯಾಯಿತು. ಆ ಆಡನ್ನು ತಿಂದು ಚಿರತೆಗಳು ಸತ್ತಿರಬಹುದೇ ಎಂಬ ಸಂಶಯವಿದೆ’’ ಎಂದು ಶ್ರೀಸತ್ಯಸಾಯಿ ಜಿಲ್ಲಾ ಅರಣ್ಯ ಅಧಿಕಾರಿ ರವೀಂದ್ರನಾಥ್ ರೆಡ್ಡಿ ತಿಳಿಸಿದರು ಎಂದು ಪಿಟಿಐ ವರದಿ ಮಾಡಿದೆ.

ಚಿರತೆಗಳಿಗೆ ವಿಷಪ್ರಾಶನವಾಗಿರಬಹುದು ಎಂಬ ಸಂಶಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News