ಬಿಜೆಪಿ ಮತ ಹಾಕುವಂತೆ ಜನರಿಗೆ ಬೆದರಿಕೆ ಒಡ್ಡುತ್ತಿದೆ: ಮಮತಾ ಬ್ಯಾನರ್ಜಿ
ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮಗೆ ಮತ ಹಾಕದೇ ಇದ್ದರೆ, ನಿಮ್ಮ ನಿವಾಸಗಳಿಗೆ ಕೇಂದ್ರ ತನಿಖಾ ಸಂಸ್ಥೆಯನ್ನು ಕಳುಹಿಸಲಾಗುವುದು ಎಂದು ಬಿಜೆಪಿ ಜನರಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ರಕ್ಷಿಸಿಕೊಳ್ಳಲು ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಎಂದು ಖಾತರಿಪಡಿಸಿಕೊಳ್ಳಿ ಎಂದು ಮಮತಾ ಬ್ಯಾನರ್ಜಿ ಕೂಚ್ಬಿಹಾರ್ನ ಮುಖ್ಯವಾಗಿ ರಾಜ್ಬನ್ಶಿಸ್ನ ಜನರಿಗೆ ಸಲಹೆ ನೀಡಿದರು.
ನಿರ್ದಿಷ್ಟ ದೇವರನ್ನು ಆರಾಧಿಸಬೇಕು ಎಂಬ ಬಿಜೆಪಿಯ ಯಾವುದೇ ಆದೇಶವನ್ನು ತಾನು ಪಾಲಿಸಲಾರೆ. ತಾನು ರಾಮಾಯಣ, ಕುರ್ಆನ್, ಬೈಬಲ್ ಹಾಗೂ ಗುರು ಗ್ರಂಥ ಸಾಹೀಬ್ ಅನ್ನು ಅನುಸರಿಸುತ್ತೇನೆ. ಹೊರಗಿನಿಂದ ತಂದ ಆಹಾರ ಸೇವಿಸಲು ಬಡವರ ಮನೆಗಳಿಗೆ ಭೇಟಿ ನೀಡುವ ನಾಟಕವನ್ನು ನಾನು ಮಾಡಲಾರೆ ಎಂದು ಅವರು ಹೇಳಿದರು.
ರಾಜಕೀಯ ಲಾಭಕ್ಕಾಗಿ ಕೇಂದ್ರ ಸರಕಾರ ಲೋಕ ಸಭೆ ಚುನಾವಣೆಗಿಂತ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆಯ ವಿಷಯವನ್ನು ಮುಂದಿಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.