"ನನ್ನ ಭೇಟಿಗೆ ಬರುವವರು ಆಧಾರ್ ಕಾರ್ಡ್ ತನ್ನಿ":‌ ವಿವಾದ ಸೃಷ್ಟಿಸಿದ ಬಿಜೆಪಿ ಸಂಸದೆ ಕಂಗನಾ ರಣಾವತ್‌ ಹೇಳಿಕೆ

Update: 2024-07-12 15:39 GMT

ಕಂಗನಾ ರಣಾವತ್‌ (Photo:X/@KanganaTeam)

ಹೊಸದಿಲ್ಲಿ: ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ತಮ್ಮ ಭೇಟಿಗೆ ಬರುವ ಜನ ಆಧಾರ್ ಕಾರ್ಡ್‍ಗಳನ್ನು ತರುವಂತೆ ಹೇಳಿಕೆ ನೀಡುವ ಮೂಲಕ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗಾನ ರಾವುತ್ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಭೇಟಿಗೆ ಕಾದು ನಿಂತಿದ್ದ ಜನರಿಗೆ ಭೇಟಿಯ ಕಾರಣವನ್ನು ಲಿಖಿತವಾಗಿ ನೀಡುವಂತೆಯೂ ನಟಿ ಕೇಳಿದ್ದಾರೆ.

ದೊಡ್ಡ ಸಂಖ್ಯೆಯ ಪ್ರವಾಸಿಗಳು ಮತ್ತು ಹೊರಗಿನವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮವನ್ನು ಜಾರಿಗೊಳಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮಂಡಿಯಲ್ಲಿ ಇರುವಾಗಲೆಲ್ಲ ನಿಯೋಜಿತ ಸಂವಾದ ಕೇಂದ್ರಗಳಲ್ಲಿ ಸಂದರ್ಶಕರನ್ನು ಭೇಟಿ ಮಾಡಲು ಲಭ್ಯವಿರುವುದಾಗಿ ಅವರು ವಿವರಿಸಿದ್ದಾರೆ.

"ಹಿಮಾಚಲ ಪ್ರದೇಶದ ದೊಡ್ಡ ಸಂಖ್ಯೆಯ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ಆದ್ದರಿಂದ ಮಂಡಿ ಪ್ರದೇಶದ ಜನರು ಆಧಾರ್ ಕಾರ್ಡ್ ತರುವುದು ಅಗತ್ಯ. ಕ್ಷೇತ್ರದಲ್ಲಿ ನಿಮ್ಮ ಕೆಲಸದ ಸಂಬಂಧದ ವಿವರವನ್ನು ಒಂದು ಪತ್ರದಲ್ಲಿ ಲಿಖಿತವಾಗಿ ನೀಡಬೇಕು. ಆದ್ದರಿಂದ ಯಾವುದೇ ಅನಾನುಕೂಲವಾಗದಂತೆ ಎಚ್ಚರ ವಹಿಸಬೇಕು" ಎಂದು ಅವರು ಮಂಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ತಿಳಿಸಿದರು.

ಜುಲೈ 11ರಂದು ನಡೆದ ಸಾರ್ವಜನಿಕ ಸಂವಾದದಲ್ಲಿ, ಸ್ಥಳೀಯ ಪಂಚಾಯ್ತಿ ಹಾಗೂ ವಿಧಾನಸಭೆ ಮಟ್ಟದ ಸಮಸ್ಯೆಗಳಿಗಿಂತ ಹೆಚ್ಚಾಗಿ ರಾಷ್ಟ್ರಮಟ್ಟದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಸದೆಯಾಗಿ ನನ್ನ ಪಾತ್ರವನ್ನು ನಿರ್ವಹಿಸುವುದು ನನ್ನ ಆದ್ಯತೆ" ಎಂದು ತಿಳಿಸಿದ್ದಾರೆ.

ಭೇಟಿಗೆ ಬರುವ ಜನ ಆಧಾರ್ ಕಾರ್ಡ್‌ ತರಬೇಕು ಎಂದ ಕಂಗನಾ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News