ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿರುವುದರ ವಿರುದ್ಧ ದೂರು

Update: 2024-05-05 04:08 GMT

ರಾಹುಲ್ ಗಾಂಧಿ (PTI)

ರಾಯಬರೇಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿರು ವಿರುದ್ಧ ದೂರು ನೀಡಲಾಗಿದೆ. ರಾಹುಲ್ಗಾಂಧಿಯವರ ಪೌರತ್ವವನ್ನು ಈ ದೂರಿನಲ್ಲಿ ಪ್ರಶ್ನಿಸಲಾಗಿದ್ದು, ಜತೆಗೆ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಅಂಶವನ್ನೂ ಪ್ರಸ್ತಾಪಿಸಲಾಗಿದೆ. ಇವರ ನಾಮಪತ್ರವನ್ನು ಚುನಾವಣಾ ಆಯೋಗ ಹೇಗೆ ಮಾನ್ಯ ಮಾಡುತ್ತದೆ ಎಂದು ಪ್ರಶ್ನಿಸಲಾಗಿದೆ.

ಅನಿರುದ್ಧ ಪ್ರತಾಪ್ ಸಿಂಗ್ ಎಂಬುವವರ ಪರವಾಗಿ ವಕೀಲ ಅಶೋಕ್ ಪಾಂಡೆ ಈ ದೂರು ಸಲ್ಲಿಸಿದ್ದಾರೆ. ರಾಯ್ ಬರೇಲಿ ಚುನಾವಣಾ ಅಧಿಕಾರಿಗೆ ಈ ಸಂಬಂಧ ದೂರು ನೀಡಲಾಗಿದ್ದು, ರಾಷ್ಟ್ರೀಯತೆ ಮತ್ತು ಶಿಕ್ಷೆ ಆಧಾರದಲ್ಲಿ ಕಾಂಗ್ರೆಸ್ ಮುಖಂಡನ ನಾಮಪತ್ರವನ್ನು ಅಸಿಂಧು ಎಂದು ಘೋಷಿಸುವಂತೆ ಆಗ್ರಹಿಸಲಾಗಿದೆ.

"ಮೊದಲನೆಯದಾಗಿ ರಾಹುಲ್ಗಾಂಧಿಗೆ ಎರಡು ವರ್ಷ ಶಿಕ್ಷೆ ಆಗಿದೆ.. ಅವರು ಚುನಾವಣೆಗೆ ಸ್ಪರ್ಧಿಸಲು ಅನರ್ಹರು, ರಾಹುಲ್ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ವಿಧಿಸಿದ್ದರೂ, ಅಫ್ಜಲ್ ಅನ್ಸಾರಿ ಪ್ರಕರಣದಲ್ಲಿ ನೀಡಿದಂತೆ ಮತ್ತೆ ಸ್ಪರ್ಧಿಸಬಹುದು ಎಂದು ಎಲ್ಲೂ ಹೇಳಿಲ್ಲ... ಆದ್ದರಿಂದ ಅವರ ಶಿಕ್ಷೆಗೆ ತಡೆ ನೀಡಿರುವುದನ್ನು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ಎಂದು ಭಾವಿಸುವಂತಿಲ್ಲ" ಎಂದು ವಾದಿಸಲಾಗಿದೆ.

ಎರಡನೆಯದಾಗಿ ರಾಹುಲ್ 2006ರಲ್ಲೇ ಬ್ರಿಟಿಷ್ ಪ್ರಜೆ ಎಂದು ಘೋಷಿಸಿಕೊಂಡಿದ್ದಾರೆ. ಬ್ರಿಟಿಷ್ ಪ್ರಜೆಯಾಗಿ ಅವರು ಸಂವಿಧಾನಾತ್ಮಕವಾಗಿ ಚುನಾವಣೆಗೆ ಸ್ಪರ್ಧಿಸುಂತಿಲ್ಲ. ನನ್ನ ದೂರಿನ ಬಳಿಕ ರಾಹುಲ್ಗಾಂಧಿಯವರ ಪ್ರತಿನಿಧಿಯನ್ನು ಕರೆಸಲಾಗಿದ್ದು, ನನ್ನ ದೂರು ಸ್ವೀಕರಿಸಲಾಗಿದೆ" ಎಂದು ವಕೀಲರು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಅಜಯ್ ಪಾಲ್ ಸಿಂಗ್ ಈ ಬಗ್ಗೆ ಹೇಳಿಕೆ ನೀಡಿ, ಅವರ ನಾಮಪತ್ರ ಹಿಂದೆಯೂ ಸಿಂಧುವಾಗಿತ್ತು. ಈಗ ಕೂಡಾ ಊರ್ಜಿತ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News