ಪಕ್ಷಾಂತರ | ಆಂಧ್ರ ಪ್ರದೇಶ ವಿಧಾನಸಭೆಯ ಎಂಟು ಶಾಸಕರು ಅನರ್ಹ

Update: 2024-02-27 15:46 GMT

Photo: ANI 

ಅಮರಾವತಿ : ಆಂಧ್ರಪ್ರದೇಶ ವಿಧಾನ ಸಭಾ ಸ್ಪೀಕರ್ ತಮ್ಮಿನೇನಿ ಸೀತಾರಾಮ ಅವರು ಪಕ್ಷಾಂತರದ ವಿರುದ್ಧ ನಿಣಾಯಕ ನಿಲುವನ್ನು ತಳೆದಿದ್ದು, ತಮ್ಮ ಮೂಲಪಕ್ಷದಿಂದ ಬೇರೆ ಪಕ್ಷಗಳಿಗೆ ನಿಷ್ಠಾಂತರ ಮಾಡಿದ್ದ ವೈಎಸ್ ಆರ್ ಸಿಪಿ ಯ ನಾಲ್ವರು ಮತ್ತು ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯ ನಾಲ್ವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ.

ವೈಎಸ್ ಆರ್ ಸಿಪಿ ಯ ಆನಂ ರಾಮನಾರಾಯಣ ರೆಡ್ಡಿ, ಮೇಕಪತಿ ಚಂದ್ರಶೇಖರ ರೆಡ್ಡಿ, ಕೋಟಂ ರೆಡ್ಡಿ ಶ್ರೀಧರ ರೆಡ್ಡಿ ಮತ್ತು ಉಂಡವಳ್ಳಿ ಶ್ರೀದೇವಿ ಹಾಗೂ ಟಿಡಿಪಿಯ ಮದ್ದಲಗಿರಿ, ಕರಣಂ ಬಲರಾಮ, ವಲ್ಲಭನೇನಿ ವಂಶಿ ಮತ್ತು ವಸುಪಲ್ಲಿ ಗಣೇಶ ಅನರ್ಹಗೊಂಡಿರುವ ಶಾಸಕರಾಗಿದ್ದಾರೆ.

ಈ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ವೈಎಸ್ಆರ್ಸಿಪಿ ಮತ್ತು ಟಿಡಿಪಿ ಸ್ಪೀಕರ್ಗೆ ದೂರುಗಳನ್ನು ಸಲ್ಲಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News