ದಿಲ್ಲಿ ಮಹಿಳಾ ಆಯೋಗ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈಗ ಆಪ್‌ ರಾಜ್ಯಸಭಾ ಅಭ್ಯರ್ಥಿ

Update: 2024-01-05 10:07 GMT

ಸ್ವಾತಿ ಮಲಿವಾಲ್ | Photo: PTI 

ಹೊಸದಲ್ಲಿ: ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರನ್ನು ಪಕ್ಷದ ರಾಜ್ಯಸಭಾ ಅಭ್ಯರ್ಥಿಯಾಗಿ ಆಮ್‌ ಆದ್ಮಿ ಪಕ್ಷ ಇಂದು ಘೋಷಿಸಿದೆ.

ಸಂಜಯ್‌ ಸಿಂಗ್ ಮತ್ತು ಎನ್‌ ಡಿ ಗುಪ್ತಾ‌ ಅವರನ್ನು ರಾಜ್ಯಸಭೆಗೆ ಎರಡನೇ ಅವಧಿಗೆ ನಾಮನಿರ್ದೇಶನ ಮಾಡಲಾಗಿದೆ ಆಪ್‌ ರಾಜಕೀಯ ವ್ಯವಹಾರಗಳ ಸಮಿತಿ ಈ ಮಾಹಿತಿ ಇಂದು ನೀಡಿದೆ.

ದಿಲ್ಲಿಯ ಮೂರು ರಾಜ್ಯಸಭಾ ಸಂಸದರ ಆರು ವರ್ಷದ ಅವಧಿ ಈ ತಿಂಗಳು ಅಂತ್ಯಗೊಳ್ಳಲಿದ್ದು ಚುನಾವಣೆ ಜನವರಿ 19ರಂದು ನಡೆಯಲಿದೆ. ದಿಲ್ಲಿ ಅಬಕಾರಿ ಹಗರಣದಲ್ಲಿ ಪ್ರಸ್ತುತ ಜೈಲಿನಲ್ಲಿರುವ ಸಂಜಯ್‌ ಸಿಂಗ್‌, ಎನ್‌ಡಿ ಗುಪ್ತಾ ಹಾಗೂ ಸುಶೀಲ್‌ ಕುಮಾರ್‌ ಗುಪ್ತಾ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ. ಸುಶೀಲ್‌ ಅವರಿಗೆ ಪಕ್ಷ ಮತ್ತೆ ಅವಕಾಶ ಒದಗಿಸಿಲ್ಲ ಆದರೆ ಅವರು ಚುನಾವಣಾ ರಾಜಕೀಯದತ್ತ ಹೆಚ್ಚು ಗಮನ ನೀಡಲು ನಿರ್ಧರಿಸಿದ್ದಾರೆ.

ಚಿಕ್ಕ ವಯಸ್ಸಿನಿಂದಲೇ ಹೋರಾಟಗಾರ್ತಿಯಾಗಿರುವ ಸ್ವಾತಿ ಮಲಿವಾಲ್ ಅವರು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗುವ ಮೊದಲು ಸಾರ್ವಜನಿಕ ಕುಂದುಕೊರತೆಗಳ ಕುರಿತು ದಿಲ್ಲಿ ಸಿಎಂ ಸಲಹೆಗಾರರಾಗಿದ್ದರು. ಇಂಡಿಯನ್‌ ಅಗೈನ್ಸ್ಟ್‌ ಕರಪ್ಶನ್‌ ಆಂದೋಲನದಲ್ಲೂ ಅವರು ಸಕ್ರಿಯರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News