ಚುನಾವಣಾ ಬಾಂಡ್‌ಗಳ ಎಲ್ಲಾ ಮಾಹಿತಿ ಗುರುವಾರದೊಳಗೆ ಬಹಿರಂಗಪಡಿಸಿ: ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

Update: 2024-03-18 06:44 GMT

ಸಾಂದರ್ಭಿಕ ಚಿತ್ರ (Photo: PTI)

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ದಾನಿಗಳನ್ನು ರಾಜಕೀಯ ಪಕ್ಷಗಳೊಂದಿಗೆ ಲಿಂಕ್‌ ಮಾಡುವ ಆಲ್ಫಾನ್ಯೂಮರಿಕ್‌ ಸೀರಿಯಲ್‌ ಕೋಡ್‌ ಸಹಿತ ಎಲೆಕ್ಟೋರಲ್‌ ಬಾಂಡ್‌ಗಳ ಕುರಿತಾದ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಇಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಯಾವುದೇ ಮಾಹಿತಿಯನ್ನು ಹತ್ತಿಕ್ಕಲಾಗಿಲ್ಲ ಎಂದು ಹೇಳುವ ಅಫಿಡವಿಟ್‌ ಅನ್ನು ಗುರುವಾರ ಸಂಜೆ 5 ಗಂಟೆಯೊಳಗೆ ಸಲ್ಲಿಸುವಂತೆಯೂ ಎಸ್‌ಬಿಐ ಅಧ್ಯಕ್ಷರಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಎಸ್‌ಬಿಐ ಒದಗಿಸಿದ ಎಲ್ಲಾ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಪಂಚ ಸದಸ್ಯರ ಪೀಠ ಸೋಮವಾರ ಎಸ್‌ಬಿಐ ಗೆ ಆದೇಶಿಸಿದೆ.

“ನಿಮ್ಮ ಬಳಿ ಇರುವ ಚುನಾವಣಾ ಬಾಂಡ್‌ಗಳ ಕುರಿತಾದ ಎಲ್ಲಾ ಮಾಹಿತಿ ಬಹಿರಂಗಪಡಿಸಬೇಕು,” ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ಚುನಾವಣಾ ಬಾಂಡ್‌ಗಳ ಕುರಿತಂತೆ ಎಸ್‌ಬಿಐ ಒದಗಿಸಿದ “ಅಪೂರ್ಣ ಡೇಟಾ” ಕುರಿತಾದ ಅರ್ಜಿಯ ವಿಚಾರಣೆ ವೇಳೆ ಈ ಸೂಚನೆ ನೀಡಲಾಗಿದೆ.

“ಏನನ್ನು ಬಹಿರಂಗಪಡಿಸಬೇಕೆಂದು ಹೇಳಿ ನಾವು ಒದಗಿಸುತ್ತೇವೆ ಎಂಬಂತಹ ಧೋರಣೆಯನ್ನು ಎಸ್‌ಬಿಐ ಹೊಂದಿರುವಂತಿದೆ. ಇದು ಸರಿಯಲ್ಲ, ನಾವು “ಎಲ್ಲಾ ವಿವರಗಳು” ಎಂದು ಹೇಳಿದಾಗ ಎಲ್ಲಾ ಲಭ್ಯ ಡೇಟಾ ಒದಗಿಸಬೇಕು,” ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

“ಪ್ರತಿಯೊಂದು ಮಾಹಿತಿ ಹೊರಬರಬೇಕು, ಯಾವುದನ್ನೂ ಅದುಮಿಡುವುದು ನಮಗೆ ಬೇಕಿಲ್ಲ,” ಎಂದು ಸಿಜೆಐ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News