ಮಾಜಿ ಪ್ರಧಾನಿ ಚರಣ್ ಸಿಂಗ್ ಗೆ ಭಾರತ ರತ್ನ ಸಿಕ್ಕಿದ್ದು ಹರ್ಷ ತಂದಿದೆ : ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ

Update: 2024-02-09 13:29 GMT

PHOTO : NDTV 

ಹೊಸದಿಲ್ಲಿ: ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವ ಕುರಿತು ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ, ಆರ್ ಎಲ್ ಡಿ ನಾಯಕ ಜಯಂತ್ ಚೌಧರಿ ಹರ್ಷ ವ್ಯಕ್ತ ಪಡಿಸಿದ್ದಾರೆ.

“ಇಂದು ನನ್ನ ಪಾಲಿಗೆ ದೊಡ್ಡ ದಿನ. ಇದೊಂದು ಭಾವನಾತ್ಮಕ ಕ್ಷಣ. ನಾನು ರಾಷ್ಟ್ರಪತಿ, ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಜಯಂತ್ ಹೇಳಿದ್ದಾರೆ.

ಉತ್ತರ ಪ್ರದೇಶ ದಲ್ಲಿ ಬಿಜೆಪಿ ಪರ ಭಾರೀ ಅಲೆ ಇರುವುದು ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಹಿರಂಗವಾಗಿರುವ ಕಾರಣ ಅಜಿತ್ ಚೌಧರಿ ಅವರ ಪುತ್ರ, ಜಯಂತ್ ಇಂಡಿಯಾ ಮೈತ್ರಿಕೂಟ ತೊರೆದು ಎನ್ ಡಿ ಎ ಮೈತ್ರಿ ಕೂಟ ಸೇರ್ಪಡೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಸಮಾಜವಾದಿ ಪಕ್ಷದೊಂದಿಗೆ ಸೀಟು ಹಂಚಿಕೆ ಮಾತುಕತೆಯನ್ನೂ ಅಂತಿಮಗೊಳಿಸಿದ್ದ ಜಯಂತ್ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆದ.

ಅಜಿತ್ ಸಿಂಗ್ 1996 ರಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ‘ಭಾರತೀಯ ಕಿಸಾನ್ ಕಾಮ್ಗಾರ್' ಪಕ್ಷವನ್ನು ಸ್ಥಾಪಿಸಿದ್ದರು. 1999 ರಲ್ಲಿ ಮತ್ತೆ ರಾಷ್ಟ್ರೀಯ ಲೋಕದಳ  ಪಕ್ಷವನ್ನು ಮರು ಪ್ರಾರಂಭಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News