ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಓದಿರುವುದಕ್ಕೆ ಸಂತಸವಾಗುತ್ತಿದೆ: ಕೇಂದ್ರ ಬಜೆಟ್ ಕುರಿತು ಪಿ.ಚಿದಂಬರಂ ವ್ಯಂಗ್ಯ

Update: 2024-07-23 12:20 GMT

ನಿರ್ಮಲಾ ಸೀತಾರಾಮನ್ ,  ಪಿ.ಚಿದಂಬರಂ | PC : PTI 

ಹೊಸದಿಲ್ಲಿ: ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಪಕ್ಷದ 2024ರ ಪ್ರಣಾಳಿಕೆ ಓದಿರುವುದಕ್ಕೆ ಸಂತಸವಾಗುತ್ತಿದೆ ಎಂದು ಮಂಗಳವಾರ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ವ್ಯಂಗ್ಯವಾಡಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸತತ ಏಳನೆಯ ಬಾರಿ ಕೇಂದ್ರ ಬಜೆಟ್ ಮಂಡಿಸಿದರು. ಈ ಮೂಲಕ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಹಿಂದಿಕ್ಕಿದರು.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪಿ.ಚಿದಂಬರಂ, "ಲೋಕಸಭಾ ಫಲಿತಾಂಶದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಪಕ್ಷದ 2024ರ ಲೋಕಸಭಾ ಚುನಾವಣಾ ಪ್ರಣಾಳಿಕೆಯನ್ನು ಓದಿದರು ಎಂದು ತಿಳಿದು ಸಂತಸವಾಯಿತು. ಅವರು ಕಾಂಗ್ರೆಸ್ ಪಕ್ಷದ 30ನೇ ಪುಟದಲ್ಲಿ ಪ್ರಸ್ತಾಪಿಸಲಾಗಿದ್ದ ಉದ್ಯೋಗ ಸಂಬಂಧಿ ಭತ್ಯೆಯನ್ನು ಅಕ್ಷರಶಃ ಅಳವಡಿಸಿಕೊಂಡಿರುವುದಕ್ಕೆ ನನಗೆ ಸಂತಸವಾಗಿದೆ" ಎಂದು ವ್ಯಂಗ್ಯವಾಡಿದ್ದಾರೆ.

"ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ 11ನೇ ಪುಟದಲ್ಲಿ ಉಲ್ಲೇಖಿಸಲಾಗಿದ್ದ ಪ್ರತಿ ಅಪ್ರೆಂಟೀಸ್‌ಗೆ ಉದ್ಯೋಗ ಭತ್ಯೆ ಒದಗಿಸುವ ಅಪ್ರೆಂಟಿಸ್‌ಶಿಪ್ ಯೋಜನೆಯನ್ನು ಪರಿಚಯಿಸಿರುವುದರ ಬಗೆಗೂ ನನಗೆ ಸಂತೋಷವಾಗಿದೆ. ಹಣಕಾಸು ಸಚಿವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಿಂದ ಮತ್ತಷ್ಟು ಉಪಾಯಗಳನ್ನು ನಕಲು ಮಾಡಬಹುದಿತ್ತು ಎಂದು ನನಗನ್ನಿಸುತ್ತದೆ. ಅವರು ಕಳೆದುಕೊಂಡಿರುವ ಅವಕಾಶಗಳನ್ನು ನಾನು ಶೀಘ್ರವೇ ಸಂಕ್ಷಿಪ್ತವಾಗಿ ಪಟ್ಟಿ ಮಾಡಲಿದ್ದೇನೆ" ಎಂದೂ ಅವರು ಗೇಲಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News