ನಿಷೇಧದ ನಡುವೆಯೂ ಬಾಡಿಗೆ ತಾಯ್ತನಕ್ಕೆ ದಾನಿಗಳ ಅಂಡಾಣು ಬಳಸಲು ಹೈಕೋರ್ಟ್ ಅಸ್ತು

Update: 2024-02-10 02:23 GMT

ಮುಂಬೈ: ದಾನಿಗಳ ಅಂಡಾಣುವನ್ನು ಬಾಡಿಗೆ ತಾಯ್ತನಕ್ಕೆ ಬಳಸುವುದನ್ನು ನಿಷೇಧಿಸುವ ಕಾನೂನು ಇದ್ದರೂ, ಈ ಎರಡು ಪ್ರಕರಣಗಳು ಪರಿಹಾರಕ್ಕೆ ಅರ್ಹ ಎಂದು ಪರಿಗಣಿಸಿದ ಮುಂಬೈ ಹೈಕೋಟ್ ಶುಕ್ರವಾರ ಪೋಷಕರಾಗುವ ನಿರೀಕ್ಷೆಯಲ್ಲಿರುವ ಎರಡು ದಂಪತಿಗಳಿಗೆ ದಾನಿಗಳ ಅಂಡಾಣುವನ್ನು ಬಳಸಿಕೊಳ್ಳಲು ಅನುಮತಿ ನೀಡಿದೆ.

2023ರ ಮಾರ್ಚ್ ನಲ್ಲಿ ಸರ್ಕಾರ, ದಾನಿಗಳ ವೀರ್ಯಾಣು ಮತ್ತು ಅಂಡಾಣುವನ್ನು ಬಾಡಿಗೆ ತಾಯ್ತನಕ್ಕೆ ಬಳಸುವುದನ್ನು ನಿಷೇಧಿಸುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಆದರೆ ನ್ಯಾಯಮೂರ್ತಿ ಗಿರೀಶ್ ಕುಲಕರ್ಣಿ ನೇತೃತ್ವದ ನ್ಯಾಯಪೀಠ, ನಿರ್ದಿಷ್ಟ ಎರಡು ಪ್ರಕರಣಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ, ದಾನಿಗಳ ಅಂಡಾಣು ಬಳಕೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ.

2023ರ ಮೊದಲಾರ್ಧದಲ್ಲಿ ಈ ಪ್ರಕರಣಗಳು ದಾಖಲಾಗಿದ್ದವು. ಒಂದು ಪ್ರಕರಣದಲ್ಲಿ ದಂಪತಿಗೆ ಪದೇ ಪದೇ ಗರ್ಭಪಾತವಾಗಿದ್ದು, ಇನ್ನೊಂದು ಪ್ರಕರಣದಲ್ಲಿ ಹಲವು ವರ್ಷ ಕಳೆದರೂ ಪತ್ನಿಗೆ ಸಂತಾನಭಾಗ್ಯ ಲಭ್ಯವಾಗಿರಲಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯ ಈ ಎರಡೂ ಮನವಿಗಳನ್ನು ತಿರಸ್ಕರಿಸಲು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ದಂಪತಿ ಪರ ವಕೀಲರು ಇದನ್ನು ವಿರೋಧಿಸಿದ್ದರು. ಇದನ್ನು ಮನ್ನಿಸಿದ ನ್ಯಾಯಪೀಠ ಈ ಎರಡು ಪ್ರಕರಣಗಳಲ್ಲಿ ದಾನಿಗಳ ಅಂಡಾಣು ಬಳಸಬಹುದು ಎಂದು ತೀರ್ಪು ನಿಡಿದೆ.

ದಾನಿಗಳ ಅಂಡಾಣು/ ವೀರ್ಯಾಣುವನ್ನು ಬಾಡಿಗೆ ತಾಯ್ತನಕ್ಕೆ ಬಳಸಿದಲ್ಲಿ ಮಗುವಿನ ಬಗ್ಗೆ ಪೋಷಕರಿಗೆ ಗಟ್ಟಿಯಾದ ಭಾವನಾತ್ಮಕ ಸಂಬಂಧ ಇರಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News