ಹಿಮಾಚಲ: ಭಾರೀ ಮಳೆ, ಭೂಕುಸಿತಕ್ಕೆ ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ

Update: 2023-07-09 07:45 GMT

Photo: Twitter@NDTV

ಕುಲು: ಹಿಮಾಚಲ ಪ್ರದೇಶದ ಕುಲುವಿನಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಬಿಯಾಸ್ ನದಿಯ ಉದ್ದಕ್ಕೂ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗವು ಭಾರೀ ಭೂಕುಸಿತದ ನಂತರ ಕೊಚ್ಚಿಕೊಂಡು ಹೊಗಿದೆ.

ಹೆದ್ದಾರಿಯಲ್ಲಿ ಹಲವಾರು ವಾಹನಗಳು ಸಿಲುಕಿಕೊಂಡಿರುವುದರಿಂದ ಮಂಡಿ ಹಾಗೂ ಕುಲು ನಡುವೆ ಸಂಚಾರ ಅಸ್ತವ್ಯಸ್ತಗೊಂಡಿದೆ . ಹೆದ್ದಾರಿ ತೆರವುಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,

ಶಿಮ್ಲಾ, ಸಿರ್ಮೌರ್, ಲಾಹೌಲ್ ಮತ್ತು ಸ್ಪಿತಿ, ಚಂಬಾ ಹಾಗೂ ಸೋಲ್ ನಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹ ವರದಿಯಾದ ನಂತರ ಹವಾಮಾನ ಕಚೇರಿಯು ರಾಜ್ಯದ ಸುಮಾರು ಏಳು ಜಿಲ್ಲೆಗಳಿಗೆ "ರೆಡ್" ಅಲರ್ಟ್ ಘೋಷಿಸಿದೆ.

ಬಿಯಾಸ್ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ವರದಿಯಾಗಿದೆ.

ಹಿಮಾಚಲದಲ್ಲಿ ಒಟ್ಟು 133 ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಆಗಿವೆ. ಕುಲು ಜಿಲ್ಲಾಡಳಿತವು ಶ್ರೀಖಂಡ್ ಮಹಾದೇವ್ ಯಾತ್ರೆಯನ್ನು ಜುಲೈ 11 ರವರೆಗೆ ಮುಂದೂಡಿದೆ


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News