ರೆಸ್ಟೋರೆಂಟ್ ಮಾಲಕರ ವಿವರ ಪ್ರದರ್ಶಿಸಲು ಆದೇಶ | ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಗೆ ಹೈಕಮಾಂಡ್ ಛೀಮಾರಿ

Update: 2024-09-26 10:51 GMT

ವಿಕ್ರಮಾದಿತ್ಯ ಸಿಂಗ್ | PTI

ಹೊಸದಿಲ್ಲಿ: ರೆಸ್ಟೋರೆಂಟ್ ಮಾಲಕರ ಹೆಸರು ಮತ್ತು ವಿಳಾಸವನ್ನು ಪ್ರದರ್ಶಿಸಲು ಕಡ್ಡಾಯಗೊಳಿಸಿದ ವಿವಾದಾತ್ಮಕ ಆದೇಶದ ಬಗ್ಗೆ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಛೀಮಾರಿ ಹಾಕಿದೆ.

ರಾಜ್ಯದಾದ್ಯಂತ ಆಹಾರ ಮಳಿಗೆಗಳಲ್ಲಿ ಮಾಲಕರ ವಿವರಗಳನ್ನು ಹಾಕುವಂತೆ ಹಿಮಾಚಲ ಪ್ರದೇಶ ಸರಕಾರ ಹೊರಡಿಸಿದ್ದ ಆದೇಶವು ಆಕ್ರೋಶಕ್ಕೆ ಕಾರಣವಾಗಿತ್ತು. ಕೆಲವು ವಾರಗಳ ಹಿಂದೆ ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ಇದೇ ರೀತಿಯ ನಡೆಯನ್ನು ಟೀಕಿಸಿದ ಕಾಂಗ್ರೆಸ್ ಈ ಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಪಕ್ಷದೊಳಗೆ ಟೀಕೆಗೆ ಗುರಿಯಾಗುತ್ತಿದ್ದಂತೆ ಈ ಬೆಳವಣಿಗೆ ನಡೆದಿದೆ.

ಈ ಬಗ್ಗೆ ಮಾಹಿತಿ ಕೋರಿ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರಿಗೆ ಹೈಕಮಾಂಡ್ ದಿಲ್ಲಿಗೆ ಬುಲಾವ್ ನೀಡಿತ್ತು.

ಈ ವಿಷಯದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ PWD ಮತ್ತು ನಗರಾಭಿವೃದ್ಧಿ ಸಚಿವಾಲಯದ ಮುಖ್ಯಸ್ಥರಾದ ವಿಕ್ರಮಾದಿತ್ಯ ಸಿಂಗ್ ಅವರನ್ನು ಕೇಳಲಾಗಿದೆ ಎಂದು ಮೂಲಗಳು Indiatoday ಗೆ ತಿಳಿಸಿವೆ. ಸಿಂಗ್ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಮಾಚಲ ಸರ್ಕಾರದ ಆದೇಶವು ಕಾಂಗ್ರೆಸ್ ನಾಯಕ ಟಿಎಸ್ ಸಿಂಗ್ ದೇವ್ ಅವರಿಂದ ಟೀಕೆಗೆ ಒಳಗಾಯಿತು, ಅವರು ಇದನ್ನು ಖಂಡನೀಯ ಮತ್ತು ತಾರತಮ್ಯದ ಕ್ರಮ ಎಂದು ಕರೆದರು.

"ಅದನ್ನು ಏಕೆ ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ. ಉತ್ತರ ಪ್ರದೇಶ ಸರ್ಕಾರವು ಕನ್ವರ್ ಯಾತ್ರೆಯ ಸಮಯದಲ್ಲಿ ನಿರ್ಧಾರ ತೆಗೆದುಕೊಂಡ ಕಾರಣ, ನಾವು ಒಬ್ಬ ವ್ಯಕ್ತಿಯ ಅಂಗಡಿಯ ವಿವರಗಳನ್ನು ಏಕೆ ಪ್ರದರ್ಶಿಸಬೇಕು? ನೀವು ವ್ಯಕ್ತಿಯನ್ನು ಮಾರಾಟ ಮಾಡುತ್ತಿಲ್ಲ, ನೀವು ಬ್ರಾಂಡ್ ಅನ್ನು ಮಾರಾಟ ಮಾಡುತ್ತಿದ್ದೀರಿ, ಒಬ್ಬ ವ್ಯಕ್ತಿಯನ್ನು ಹೆಸರಿಸುವ ಅಗತ್ಯವಿಲ್ಲ, ”ಎಂದು ಛತ್ತೀಸ್‌ಗಢದ ಮಾಜಿ ಉಪಮುಖ್ಯಮಂತ್ರಿ ಎಂದು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News