ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನಾದರೂ ಗಳಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ: ಪ್ರಧಾನಿ ಮೋದಿ ವ್ಯಂಗ್ಯ

Update: 2024-02-07 10:37 GMT

Photo: PTI

ಹೊಸದಿಲ್ಲಿ : ಈ ವರ್ಷ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ದಾಟುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಅವರು, ಕಾಂಗ್ರೆಸ್ ಪಕ್ಷ "ಹಳತಾಗಿದೆ" ಎಂದು ಕರೆದಿದ್ದಾರೆ ಎಂದು indiatoday ವರದಿ ಮಾಡಿದೆ.

ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, "2024 ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ 40 ದಾಟಲು ಸಾಧ್ಯವಿಲ್ಲ ಎಂಬ ಸವಾಲನ್ನು ನಿಮ್ಮ ಮುಂದಿದೆ. ನಿಮಗೆ 40 ಸ್ಥಾನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, "ಆ ದಿನ ಅದನ್ನು ಹೇಳಲು ಸಾಧ್ಯವಾಗಲಿಲ್ಲ. ಖರ್ಗೆ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಆ ದಿನ ನಾನು ಅವರ ಮಾತನ್ನು ಬಹಳ ಗಮನವಿಟ್ಟು ಕೇಳುತ್ತಿದ್ದೆ.ಲೋಕಸಭೆಯಲ್ಲಿ ಮನರಂಜನೆಯ ಕೊರತೆಯಿತ್ತು. ಅದನ್ನು ಅವರು ಪೂರೈಸಿದರು" ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ‘ಕಳೆದ ವರ್ಷಗಳ ಘಟನೆ ನನಗೆ ನೆನಪಿದೆ. ಸಂಸತ್ ನಲ್ಲಿ ಕುಳಿತು ಕುಳಿತು ದೇಶದ ಪ್ರಧಾನಿಯ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದವು. ಇಂದು ಕೂಡ ನೀವು ಕೇಳದಿರಲು ಸಿದ್ಧರಾಗಿ ಬಂದಿದ್ದೀರಿ.

ಆದರೆ ನೀವು ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ದೇಶದ ಜನರು ಈ ಧ್ವನಿಯನ್ನು ಬಲಪಡಿಸಿದ್ದಾರೆ. ನಾನು ಕೂಡ ಈ ಬಾರಿ ಸಿದ್ಧರಾಗಿ ಬಂದಿದ್ದೇನೆ" ಎಂದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News