ಖಾಝಿ ತ್ವಾಖಾ ಉಸ್ತಾದರಿಂದ ಆಂಧ್ರಪ್ರದೇಶದಲ್ಲಿ ಮಸೀದಿ ಉದ್ಘಾಟನೆ

Update: 2024-03-01 09:53 GMT

ಅಮರಾವತಿ: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಅವರು ವಿಜಿಲಾಪುರಂ ನಲ್ಲಿ ಕಾಸರಗೋಡು ಮೂಲದ ಇಮಾಮ ಸಂಘದ ವತಿಯಿಂದ ನಿರ್ಮಿಸಲಾದ ಮಾಲಿಕ್ ದೀನಾರ್ ಜುಮಾ ಮಸೀದಿಯನ್ನು ಉದ್ಘಾಟಿಸಿದರು.‌

ಹಿಂದುಳಿದ ಪ್ರದೇಶಗಳ ಜನತೆಯ ಧಾರ್ಮಿಕ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಕಾರ್ಯಾಚರಿಸುತ್ತಿರುವ ಹುದವಿಗಳ ಹಾದಿಯಾ ಘಟಕದೊಂದಿದೆ ಇಮಾಮ ಸಂಘ ಕೈ ಜೋಡಿಸಿ ನಿರ್ಮಿಸಿದ ಮದ್ರಸ ಕಟ್ಟಡವನ್ನೂ ಖಾಝಿಯವರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಖಾಝಿ ಅವರು,  ಮೌಲ್ಯಯುತ ಶಿಕ್ಷಣ ದೇಶದ ಪ್ರತಿಯೊಂದು ಪ್ರಜೆಯ ಹಕ್ಕು. ಬಡ ನಿರ್ಗತಿಕ ಪ್ರದೇಶದ ಶೈಕ್ಷಣಿಕ ಪ್ರಗತಿ ದೇಶದ ಶಿಕ್ಷಣ ಕ್ರಾಂತಿಗೆ ಬುನಾದಿಯಾಗಿದೆ.ದೇಶದಾದ್ಯಂತ ಹಾದಿಯಾ ಘಟಕ ಎರಡೂವರೆ ಸಾವಿರ ಶಾಲೆಗಳನ್ನು ನಡೆಸುತ್ತಿದ್ದು ದೇಶದ ಪ್ರತಿಯೊಂದು ಹಳ್ಳಿಗಳಲ್ಲೂ ಮುಂದೊಂದು ದಿನ ಶೈಕ್ಷಣಿಕ ಕ್ರಾಂತಿ ಬೆಳಗಲಿ ಎಂದು ಹಾರೈಸಿದರು.

ಎರಡು ದಿನದ ಅಂತರ್ ರಾಜ್ಯ ಪ್ರವಾಸವನ್ನು ಕೈ ಗೊಂಡ ಖಾಝಿಯವರು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳು ನಾಡಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು. ಖಾಝಿಯವರೊಂದಿಗೆ ಹುಸೈನ್ ರಹ್ಮಾನಿ, ಸೈಫುಲ್ಲಾಹ್, ರಈಸ್ ಹುದವಿ, ಅಬ್ದುಸ್ಸಮದ್ ಹುದವಿ, ಲುಕ್ಮಾನ್ ಹುದವಿ ಮತ್ತು ಮುಈನುದ್ದೀನ್ ಹುದವಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News