ಮೆಟಾ ಮತ್ತು ಗೂಗಲ್‌ ವೇದಿಕೆಗಳು 'ತಟಸ್ಥ'ವಾಗಿರಬೇಕು : ಇಂಡಿಯಾ ಒಕ್ಕೂಟ

ಕೋಮು ದ್ವೇಷವನ್ನು ಪ್ರಚೋದಿಸುವ ಆರೋಪದಲ್ಲಿ ಫೇಸ್‌ಬುಕ್, ವಾಟ್ಸಾಪ್ ಮತ್ತು ಯೂಟ್ಯೂಬ್‌ನ ಪಾತ್ರದ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ, ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಮೆಟಾ ಮತ್ತು ಗೂಗಲ್‌ನ ಸಿಇಒಗಳಾದ ಮಾರ್ಕ್ ಜುಕರ್‌ಬರ್ಗ್ ಮತ್ತು ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದೆ.

Update: 2023-10-12 19:27 GMT

PHOTO : PTI

ಹೊಸದಿಲ್ಲಿ : ಕೋಮು ದ್ವೇಷವನ್ನು ಪ್ರಚೋದಿಸುವ ಆರೋಪದಲ್ಲಿ ಫೇಸ್‌ಬುಕ್, ವಾಟ್ಸಾಪ್ ಮತ್ತು ಯೂಟ್ಯೂಬ್‌ನ ಪಾತ್ರದ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ, ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಮೆಟಾ ಮತ್ತು ಗೂಗಲ್‌ನ ಸಿಇಒಗಳಾದ ಮಾರ್ಕ್ ಜುಕರ್‌ಬರ್ಗ್ ಮತ್ತು ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಫೇಸ್‌ ಬುಕ್‌, ಯೂಟ್ಯೂಬ್‌, ವಾಟ್ಸಪ್ "ತಟಸ್ಥ"ವಾಗಿ ಕಾರ್ಯ ನಿರ್ವಹಿಸಬೇಕು ಎಂದು ಆಗ್ರಹಿಸಿರುವ ವಿರೋಧ ಪಕ್ಷಗಳ ಒಕ್ಕೂಟ, ಈ ವೇದಿಕೆಗಳನ್ನು "ಸಾಮಾಜಿಕ ಅಶಾಂತಿಯನ್ನು ಉಂಟುಮಾಡಲು ಬಳಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದೆ.

ಈ ಪತ್ರಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಒಕ್ಕೂಟದ 12 ಪಕ್ಷಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ

ಎರಡು ಪತ್ರಗಳಲ್ಲಿ, ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಬಣವು ಭಾರತೀಯ ಮತದಾರರಲ್ಲಿ ಅರ್ಧದಷ್ಟು ಜನರನ್ನು ಪ್ರತಿನಿಧಿಸುತ್ತದೆ ಎಂದು ಒತ್ತಿ ಹೇಳಿದೆ. ಆಡಳಿತ ಪಕ್ಷದ ವಿಷಯವನ್ನು ಪ್ರಚಾರ ಮಾಡುವಾಗ ಮೆಟಾ ಮತ್ತು ಗೂಗಲ್ ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ಪಕ್ಷಪಾತಿಯಂತೆ ನೋಡುತ್ತಿದೆ ಎಂದು ಪತ್ರವು ಆರೋಪಿಸಿದೆ. "ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾದ ಬಗ್ಗೆ ಖಾಸಗಿ ವಿದೇಶಿ ಕಂಪನಿ ತೋರುತ್ತಿರುವ ಪಕ್ಷಪಾತವು, ಭಾರತದ ಪ್ರಜಾಪ್ರಭುತ್ವದಲ್ಲಿ ಮಧ್ಯಪ್ರವೇಶಿಸುವುದಕ್ಕೆ ಸಮಾನವಾಗಿದೆ, ಇದೊಂದು ಗಂಭೀರ ವಿಚಾರ" ಎಂದು ಪತ್ರದಲ್ಲಿ ಹೇಳಲಾಗಿದೆ.

ಗೂಗಲ್‌ನ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನ ಸಂದರ್ಭದಲ್ಲಿ, ಪತ್ರವು ವಾಷಿಂಗ್ಟನ್ ಪೋಸ್ಟ್ ಲೇಖನವನ್ನು ಉಲ್ಲೇಖಿಸಿದೆ. ಕೊಲೆ ಪ್ರಕರಣದಲ್ಲಿ ಸೆಪ್ಟೆಂಬರ್ 12 ರಂದು ಬಂಧಿಸಲ್ಪಟ್ಟ ಗೋರಕ್ಷಕ ಮೋನು ಮಾನೇಸರ್ ನ ಯೂಟ್ಯೂಬ್ ಚಾನೆಲ್ ಪಾತ್ರವನ್ನು ವಿವರಿಸಲಾಗಿದೆ. “ಭಾರತೀಯ ಮುಸ್ಲಿಮರ ಮೇಲಿನ ದಾಳಿಗಳನ್ನು ಲೈವ್-ಸ್ಟ್ರೀಮ್ ಮಾಡಿದ್ದಕ್ಕಾಗಿ ಯೂಟ್ಯೂಬ್ ಆತನಿಗೆ ಪ್ರಶಸ್ತಿ ನೀಡಿದೆ”.. ಕಳೆದ ಅಕ್ಟೋಬರ್‌ನಲ್ಲಿ 1,00,000 ಚಂದಾದಾರರನ್ನು ತಲುಪಿದ್ದಕ್ಕಾಗಿ ಮನೇಸರ್ ಚಾನೆಲ್‌ ಗೆ ಯೂಟ್ಯೂಬ್‌ನಿಂದ "ಸಿಲ್ವರ್ ಕ್ರಿಯೇಟರ್" ಪ್ರಶಸ್ತಿಯನ್ನು ಪಡೆದುಕೊಂಡಿದೆ "ದಿ ವಾಷಿಂಗ್ಟನ್ ಪೋಸ್ಟ್‌ನ ಈ ಸಮಗ್ರ ತನಿಖೆಯಿಂದ ಆಲ್ಫಾಬೆಟ್ ಮತ್ತು ನಿರ್ದಿಷ್ಟವಾಗಿ ಯೂಟ್ಯೂಬ್ ಸಾಮಾಜಿಕ ಅಸ್ತಿರತೆಗೆ ಕುಮ್ಮಕ್ಕು ನೀಡುವುದು ಮತ್ತು ಭಾರತದಲ್ಲಿ ಕೋಮು ದ್ವೇಷ ಹಬ್ಬಿಸುವಲ್ಲಿ ಪರೋಕ್ಷವಾಗಿ ನೆರವಾಗುತ್ತಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ಜುಕರ್‌ಬರ್ಗ್‌ಗೆ ಬರೆದ ಪತ್ರದಲ್ಲಿ, ವಿರೋಧ ಪಕ್ಷಗಳ ಒಕ್ಕೂಟ ವಾಷಿಂಗ್‌ಟನ್ ಪೋಸ್ಟ್‌ನ ಒತ್ತಡದಿಂದಾಗಿ ಫೇಸ್‌ಬುಕ್ ಭಾರತದಲ್ಲಿ ದ್ವೇಷ ಭಾಷಣದ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂಬ ಲೇಖನವನ್ನು ಉಲ್ಲೇಖಿಸಿದೆ. ವಿರೋಧ ಪಕ್ಷವಾದ ನಮಗೆ ಇದು ಚೆನ್ನಾಗಿ ತಿಳಿದಿದೆ. ಈ ಹಿಂದೆ ಹಲವಾರು ಬಾರಿ ಇದನ್ನು ಒತ್ತಿ ಹೇಳಿದ್ದೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇಬ್ಬರೂ CEO ಗಳಿಗೆ, ಪತ್ರವು ಅವರ ಸಾಮಾಜಿಕ ಜಾಲ ತಾಣದ ವೇದಿಕೆಗಳನ್ನು " ತಿಳಿದೋ ಅಥವಾ ತಿಳಿಯದೆಯೋ, ಸಾಮಾಜಿಕ ಅಶಾಂತಿಯನ್ನು ಉಂಟುಮಾಡಲು ಅಥವಾ ಪ್ರಜಾಪ್ರಭುತ್ವದ ಆದರ್ಶಗಳನ್ನು ವಿರೂಪಗೊಳಿಸಲು ಬಳಸುವುದಿಲ್ಲ. ಅವುಗಳು ತಟಸ್ಥವಾಗಿ ಉಳಿಯುವಂತೆ ಖಚಿತಪಡಿಸಿಕೊಳ್ಳಬೇಕು” ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News