2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಪ್ರಯತ್ನ: ಪ್ರಧಾನಿ ಮೋದಿ

Update: 2023-10-15 03:28 GMT

Photo: twitter.com/the_newsmen

ಮುಂಬೈ: ಏಷ್ಯನ್ ಗೇಮ್ಸ್ ನಲ್ಲಿ ಇದೇ ಮೊದಲ ಬಾರಿಗೆ ಪದಕ ಗಳಿಕೆಯಲ್ಲಿ ಭಾರತಶತಕ ಸಾಧನೆ ಮಾಡಿರುವ ಬೆನ್ನಲ್ಲೇ, ವಿಶ್ವದ ಅತಿದೊಡ್ಡ ಕ್ರೀಡಾ ಉತ್ಸವವಾದ ಒಲಿಂಪಿಕ್ಸ್ ಕೂಟವನ್ನು ಭಾರತದಲ್ಲಿ ಆಯೋಜಿಸುವ ಪ್ರಯತ್ನವನ್ನು ಭಾರತ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಬಿಡ್ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಮುಂದಾಗುವ ನಿರ್ಧಾರ ಅಚಲ. ಒಲಿಂಪಿಕ್ಸ್ ಕ್ರೀಡೆಗಳ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದೆ. ಇದು 140 ಕೋಟಿ ಭಾರತೀಯರ ಹಲವು ವರ್ಷಗಳ ಕನಸು ಮತ್ತು ಬಯಕೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ 141ನೇ ಅಧಿವೇಶನದಲ್ಲಿ ಮಾತನಾಡಿದ ಅವರು ಹೇಳಿದರು.

"ಈ ಕನಸನ್ನು ನಿಮ್ಮ ಸಹಭಾಗಿತ್ವ ಮತ್ತು ಸಹಕಾರದಲ್ಲಿ ಇದನ್ನು ನನಸುಗೊಳಿಸಲು ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ ಭಾರತ ಐಓಸಿಯ ಸಹಕಾರ ದೊರಕುತ್ತದೆ ಎಂಬ ವಿಶ್ವಾಸವಿದೆ" ಎಂದರು. ಭಾರತದಲ್ಲಿ ಕ್ರೀಡೆಯ ಸಂಪ್ರದಾಯ ಸಿಂಧೂ ಕಣಿವೆ ನಾಗರೀಕತೆಯಷ್ಟು ಹಳೆಯದು ಎಂದ ಅವರು, ಭಾರತೀಯರು ಕ್ರೀಡಾಪ್ರೇಮಿಗಳು ಮಾತ್ರವಲ್ಲ, ಅದು ಅವರ ಜೀವ. ದೇಶ ಕೂಡಾ 2029ರ ಯುವ ಒಲಿಂಪಿಕ್ಸ್ ನ ಆತಿಥ್ಯಕ್ಕೂ ಉತ್ಸುಕವಾಗಿದೆ" ಎಂದು ಸ್ಪಷ್ಟಪಡಿಸಿದರು.

ಭಾರತಕ್ಕೆ ಜಾಗತಿಕ ಕೂಟವನ್ನು ಆಯೋಜಿಸಲು ಅಗತ್ಯವಾದ ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಅಗತ್ಯ ಸಂಘಟನಾ ಸಾಮರ್ಥ್ಯ ಇದೆ. ಜಿ20 ಶೃಂಗ ಮತ್ತು ಅಧ್ಯಕ್ಷತೆಯನ್ನು ಉದಾಹರಿಸಿದ ಅವರು 60ಕ್ಕೂ ಹೆಚ್ಚು ನಗರಗಳಲ್ಲಿ ಈ ಸಂಬಂಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದು ಪ್ರತಿ ವಲಯದಲ್ಲೂ ಭಾರತದ ಸಂಘಟನಾ ಸಾಮರ್ಥ್ಯಕ್ಕೆ ಉದಾಹರಣೆ ಎಂದು ಬಣ್ಣಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News