2024ರ ಭಾರತದ ಗೂಗಲ್ ಟಾಪ್ ಸರ್ಚ್ ಯಾವುದು ಗೊತ್ತೇ?

Update: 2024-12-11 11:50 GMT

ಹೊಸದಿಲ್ಲಿ: ಭಾರತೀಯರು ಕ್ರಿಕೆಟ್, ರಾಜಕೀಯದಲ್ಲಿ ಅತೀವ ಆಸಕ್ತಿ ಹೊಂದಿರುವ ಸಂಗತಿ 2024ರ ಗೂಗಲ್ ಸರ್ಚ್ ದತ್ತಾಂಶದಲ್ಲಿ ಬಯಲಾಗಿದ್ದು, ಐಪಿಎಲ್, ಟಿ-20 ವಿಶ್ವಕಪ್ ಹಾಗೂ ಬಿಜೆಪಿ ಕುರಿತ ಕೀವರ್ಡ್ ಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ ಎಂದು ವರದಿಯಾಗಿದೆ.

ಐಪಿಎಲ್ ಕ್ರೀಡಾಕೂಟದ ಫೈನಲ್ ಪಂದ್ಯದ ಕೀವರ್ಡ್ ಗೂಗಲ್ ಸರ್ಚ್ ನಲ್ಲಿ ಅತಿ ಹೆಚು ಸರ್ಚ್‌ ಮಾಡಲಾಗಿದೆ. ಐಪಿಎಲ್ ಕುರಿತ ಹುಡುಕಾಟವು ಮೇ 12 ಹಾಗೂ ಮೇ 18ರಂದು ಏರಿಕೆಯಾಗಿತ್ತು. ಅಲ್ಲದೆ, 2024ರಲ್ಲಿ ಟಿ-20 ವಿಶ್ವಕಪ್ ಕುರಿತ ಕೀವರ್ಡ್ ಗಳು ಈ ಪಟ್ಟಿಯಲ್ಲಿ ಭಾರತದಲ್ಲಿನ ಅತಿ ಹೆಚ್ಚು ಹುಡುಕಾಟದ ಕೀವರ್ಡ್ ಗಳಾಗಿವೆ.

ಖ್ಯಾತ ವ್ಯಕ್ತಿಗಳ ಪೈಕಿ ರತನ್ ಟಾಟಾ ಹೆಸರು ಅಗ್ರಸ್ಥಾನದಲ್ಲಿದೆ. ಅಕ್ಟೋಬರ್ ತಿಂಗಳಲ್ಲಿ ನಿಧನರಾಗಿದ್ದ 86 ವರ್ಷದ ಉದ್ಯಮಿ ಹಾಗೂ ದಾನಿ ರತನ್ ಟಾಟಾಗೆ ಆನ್ ಲೈನ್ ಮತ್ತು ಆಫ್ ಲೈನ್ ಸಂತಾಪಗಳ ಮಹಾಪೂರವೇ ಹರಿದು ಬಂದಿತ್ತು.

ರಾಜಕೀಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೀವರ್ಡ್ ಹೆಚ್ಚು ಸಕ್ರಿಯವಾಗಿ ಹುಡುಕಾಟ ನಡೆಸಿದ್ದು, ಜೂನ್ 2 ಹಾಗೂ ಜೂನ್ 8ರ ನಡುವೆ ಏರುಗತಿ ಕಂಡಿದೆ. ಏಳು ಹಂತಗಳ 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಜೂನ್ 4ರಂದು ಪ್ರಕಟಗೊಂಡಿದ್ದವು.

ಈ ವರ್ಷದಲ್ಲಿ ಚುನಾವಣಾ ಫಲಿತಾಂಶಗಳ ಕೀವರ್ಡ್ ಮತ್ತೊಂದು ಮೇಲುಗೈ ಸಾಧಿಸಿದ ಹುಡುಕಾಟವಾಗಿದ್ದು, ಗೂಗಲ್ ಸರ್ಚ್ ನಲ್ಲಿ ಈ ವರ್ಷ ನಾಲ್ಕನೆ ಸ್ಥಾನದಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್ 2024, ಪ್ರೊ ಕಬಡ್ಡಿ ಲೀಗ್, ಇಂಡಿಯನ್ ಸೂಪರ್ ಲೀಗ್ ಕೂಡಾ ಗಮನಾರ್ಹ ಗಾತ್ರದ ಹುಡುಕಾಟಗಳನ್ನು ಪಡೆದಿದ್ದು, ಭಾರತೀಯರಲ್ಲಿ ಕ್ರಿಕೆಟ್ ಅಲ್ಲದೆ ಉಳಿದ ಕ್ರೀಡೆಗಳ ಕುರಿತೂ ಹೆಚ್ಚುತ್ತಿರುವ ಗಮನಾರ್ಹ ಆಸಕ್ತಿಯನ್ನು ಒತ್ತಿ ಹೇಳುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News