2023ರಲ್ಲಿ ಭಾರತದಲ್ಲೇ ಅತಿ ಹೆಚ್ಚು ದೀರ್ಘಾವಧಿ ಅಂತರ್ಜಾಲ ಸ್ಥಗಿತ!

Update: 2024-01-01 13:45 GMT

Photo: theprint.in

ಹೊಸದಿಲ್ಲಿ: ಕಳೆದ ವರ್ಷ ಸ್ಫೋಟಗೊಂಡ ಮಣಿಪುರ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ 200 ದಿನಗಳ ಕಾಲ ವಿಸ್ತರಿತ ಅಂತರ್ಜಾಲ ಸೇವೆಯ ಮೇಲೆ ನಿರ್ಬಂಧ ಹೇರಿದ ಪರಿಣಾಮ ಚುರಾಚಂದಪುರ್ ಜಿಲ್ಲೆಯ 39 ವರ್ಷದ ಡಾ. ನೈಜವುಂಗ್ ಎಂಬ ಕ್ಷಕಿರಣ ತಜ್ಞರು ಹಲವಾರು ತಿಂಗಳುಗಳ ಕಾಲ ಕ್ಷಕಿರಣ ವರದಿಯನ್ನು ಕೈಯಲ್ಲೇ ರವಾನಿಸಬೇಕಾಗಿ ಬಂದಿತ್ತು. ಕಾಶ್ಮೀರದಲ್ಲಿ 552 ದಿನಗಳ ಕಾಲ ಅಂತರ್ಜಾಲ ಸೇವೆಯನ್ನು ನಿರ್ಬಂಧಿಸಿದ ನಂತರ ಮಣಿಪುರದಲ್ಲೇ ಅತೀ ದೀರ್ಘಕಾಲ ಅಂತರ್ಜಾಲ ಸೇವೆಯ ಮೇಲೆ ನಿರ್ಬಂಧ ಹೇರಿದ್ದು. ಈ ನಿರ್ಬಂಧದಿಂದಾಗಿ ಸತತ ಐದು ವರ್ಷಗಳ ಕಾಲ ಅಂತರ್ಜಾಲ ಸೇವೆಯ ಮೇಲೆ ನಿರ್ಬಂಧ ಹೇರಿದ ಜಾಗತಿಕ ನಾಯಕನಾಗಿ ಭಾರತವು ಹೊರಹೊಮ್ಮಿದೆ ಎಂದು ಭಾರತದಲ್ಲಿನ ಕಾನೂನು ಸೇವಾ ಸಂಸ್ಥೆ ಸಾಫ್ಟ್ ವೇರ್ ಫ್ರೀಡಂ ಲಾ ಸೆಂಟರ್ ಹೇಳಿದೆ.

ಮಣಿಪುರದಲ್ಲಿ ಕುಕಿ ಝೋ ಹಾಗೂ ಮೈತೇಯಿ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ಸ್ಫೋಟಗೊಂಡ ನಂತರ ಮೇ 3ರಂದು ರಾಜ್ಯಾದ್ಯಂತ ಅಂತರ್ಜಾಲ ಸೇವೆಯ ಮೇಲೆ ನಿರ್ಬಂಧ ಹೇರಲಾಗಿತ್ತು. ಈ ಪೂರ್ಣಪ್ರಮಾಣದ ನಿರ್ಬಂಧವು ಈಶಾನ್ಯ ಭಾರತದಲ್ಲಿ ಹೇರಲಾದ ಅತ್ಯಂತ ದೀರ್ಘಾವಧಿಯ ನಿರ್ಬಂಧವಾಗಿದೆ. ಸೆಪ್ಟೆಂಬರ್ 23, 2023ರಂದು ಈ ನಿರ್ಬಂಧವನ್ನು ತೆರವುಗೊಳಿಸಲಾಯಿತಾದರೂ, ಮೂರು ದಿನಗಳ ನಂತರ ಮತ್ತೆ ನಿರ್ಬಂಧ ಹೇರಲಾಗಿತ್ತು. ಈ ನಿರ್ಬಂಧವು ಪುನಃ ಡಿಸೆಂಬರ್ 3ರವರೆಗೆ ಮುಂದುವರಿದಿತ್ತು.

The Internet Society Pulseನ ನಿವ್ವಳ ನಷ್ಟ ಗಣಕದ ಪ್ರಕಾರ, ಈ ಅಂತರ್ಜಾಲ ನಿರ್ಬಂಧದಿಂದಾಗಿ ಭಾರತದ ಆರ್ಥಿಕತೆಗೆ ಸುಮಾರು 2.8 ಬಿಲಿಯನ್ ಡಾಲರ್ ನಷ್ಟವಾಗಿದೆ. ಅಂತರ್ಜಾಲ ಸ್ಥಗಿತದ ಪರಿಣಾಮವನ್ನು ಆರ್ಥಿಕ, ಸಾಮಾಜಿಕ ಹಾಗೂ ಇನ್ನಿತರ ಪರಿಣಾಮಗಳನ್ನು ಆಧರಿಸಿ ಈ ಗಣಕವು ಲೆಕ್ಕ ಮಾಡುತ್ತದೆ. ಭಾರತದಲ್ಲಿ ಇಂತಹ ಅಂತರ್ಜಾಲ ಸೇವೆ ಸ್ಥಗಿತದ ಅಪಾಯವನ್ನು ಶೇ. 16.2 ಎಂದು ಗುರುತಿಸಿರುವ ಈ ವೇದಿಕೆಯು, 2023ರಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಅವಧಿಯ ನಿರ್ಬಂಧವಿದು ಎಂದು ಹೇಳಿದೆ.

Top10VPN.com ಒದಗಿಸಿರುವ ದತ್ತಾಂಶದ ಪ್ರಕಾರ, 6000ಕ್ಕೂ ಹೆಚ್ಚು ಗಂಟೆಯ ಅಂತರ್ಜಾಲ ಸೇವೆ ಸ್ಥಗಿತದಿಂದ 56.7 ದಶಲಕ್ಷ ಜನರಿಗೆ ಸಮಸ್ಯೆಯನ್ನುಂಟು ಮಾಡುವ ಮೂಲಕ ಭಾರತವು 481.6 ದಶಲಕ್ಷ ಡಾಲರ್ ನಷ್ಟ ಅನುಭವಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News