ಮಣಿಪುರ: ಜಿರಿಬಾಮ್ ನಿಂದ ಆರು ಮಂದಿಯ ಅಪಹರಣ ಬೆನ್ನಲ್ಲೇ ಮೂರು ಶವ ಪತ್ತೆ

Update: 2024-11-16 03:14 GMT

PC: x.com/htTweets

ಇಂಫಾಲ: ಮಣಿಪುರ- ಅಸ್ಸಾಂ ಗಡಿಯಲ್ಲಿ ಶುಕ್ರವಾರ ಮಹಿಳೆ ಮತ್ತು ನವಜಾತ ಶಿಶು ಸೇರಿದಂತೆ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಒಂದು ಕುಟುಂಬದ ಆರು ಮಂದಿಯನ್ನು ಶಂಕಿತ ಉಗ್ರರು ಜಿರಿಬಾಮ್ ನಿಂದ ಅಪಹರಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ನಾಗರಿಕರನ್ನು ಬೆಚ್ಚಿ ಬೀಳಿಸಿದೆ.

ಅಂತರರಾಜ್ಯ ಗಡಿಯಲ್ಲಿ ಅಪಹರಣ ನಡೆದ 15 ಕಿಲೋಮೀಟರ್ ದೂರದ ನದಿ ಬಳಿ ಕೊಳೆತ ಸ್ಥಿತಿಯಲ್ಲಿದ್ದ ಈ ಶವಗಳು ಪತ್ತೆಯಾಗಿವೆ. ಆದರೆ ಈ ಮೃತದೇಹಗಳು ಅಪಹರಣಕ್ಕೆ ಒಳಗಾಗಿರುವವರದ್ದೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಈ ಮೃತದೇಹಗಳನ್ನು ಗುರುತಿಸುವಿಕೆಗಾಗಿ ಸಿಲ್ಚೇರ್ ಗೆ ಒಯ್ಯಲಾಗಿದೆ. ಇವರ ಗುರುತು ಪತ್ತೆಯಾಗಿಲ್ಲ. ಒಂದೇ ಕುಟುಂಬದ ಆರು ಮಂದಿಯ ಅಪಹರಣ ನಡೆದ 15-20 ಕಿಲೋಮೀಟರ್ ದೂರದಲ್ಲಿ ಈ ಶವಗಳು ಪತ್ತೆಯಾಗಿವೆ. ಪೊಲೀಸರು ಮೃತರ ಗುರುತು ಪತ್ತೆ ಮಾಡುವಲ್ಲಿ ವಿಫಲರಾದರೆ ಡಿಎನ್ಎ ಪರೀಕ್ಷೆ ನಡೆಸಲಾಗುತ್ತದೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಿಆರ್ ಪಿಎಫ್ ನೆಲೆಯ ಮೇಲೆ ಸಶಸ್ತ್ರ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ 10 ಮಂದಿ ಶಂಕಿತ ಉಗ್ರರನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ ಬೆನ್ನಲ್ಲೇ ಮಂಗಳವಾರ ಜಿರಿಬಾಮ್ ಗ್ರಾಮದಲ್ಲಿ ಇಬ್ಬರು ನಾಗರಿಕರ ಶವ ಪತ್ತೆಯಾಗಿತ್ತು. ಅದೇ ಗ್ರಾಮದ ಮೀಟಿ ಕುಟುಂಬಕ್ಕೆ ಸೇರಿದ ಮೂವರು ಮಹಿಳೆಯರು ಹಾಗೂ ಮೂವರು ಮಕ್ಕಳು ನಾಪತ್ತೆಯಾಗಿದ್ದರು. ಇವರನ್ನು ಉಗ್ರರು ಅಪಹರಿಸಿರಬೇಕು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News