ಬೆಂಗಳೂರಿನ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ಹೊರಟ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್

Update: 2023-07-18 05:10 GMT

ಮುಂಬೈ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂಬೈನಲ್ಲಿರುವ ತಮ್ಮ ನಿವಾಸದಿಂದ ನಿರ್ಗಮಿಸಿದ್ದು, ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿ ಜಂಟಿ ವಿರೋಧ ಪಕ್ಷದ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಬರಮಾಡಿಕೊಂಡರು.

ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ರಣತಂತ್ರ ರೂಪಿಸುವ ನಿಟ್ಟಿನಲ್ಲಿ 26 ಪಕ್ಷಗಳ ನಾಯಕರು ಮಂಗಳವಾರ ಎರಡನೇ ದಿನವೂ ತಮ್ಮ ಸಭೆಯನ್ನು ಮುಂದುವರಿಸಲಿದ್ದಾರೆ. ಅವರು ಚರ್ಚೆಯ ಸಮಯದಲ್ಲಿ ತಮ್ಮ ಮೈತ್ರಿಯ ಹೆಸರನ್ನು ಅಂತಿಮಗೊಳಿಸುತ್ತಾರೆ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಸಹ ಅಂತಿಮಗೊಳಿಸಲಿದ್ದಾರೆ.. ಕಾರ್ಯಕ್ರಮಗಳು, ರ್ಯಾಲಿಗಳು ಮತ್ತು ಸಮಾವೇಶಗಳ ಜಂಟಿ ವಿರೋಧದ ಕಾರ್ಯಕ್ರಮವನ್ನು ಸಹ ಹೊರತರುವ ನಿರೀಕ್ಷೆಯಿದೆ.

ಸೋಮವಾರ ನಡೆದ ಔತಣಕೂಟದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಎಂ.ಕೆ. ಸ್ಟಾಲಿನ್, ನಿತೀಶ್ ಕುಮಾರ್, ಅರವಿಂದ ಕೇಜ್ರಿವಾಲ್ ಮತ್ತು ಹೇಮಂತ್ ಸೊರೆನ್ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಭಾಗವಹಿಸಿದ್ದರು.

. ಈ ಸಭೆಯು ಭಾರತೀಯ ರಾಜಕೀಯ ಸನ್ನಿವೇಶಕ್ಕೆ "ಗೇಮ್ ಚೇಂಜರ್" ಎಂದು ಪ್ರತಿಪಕ್ಷ ನಾಯಕರು ಪ್ರತಿಪಾದಿಸಿದ್ದು, ಈ ಸಭೆಯಲ್ಲಿ "ಯುನೈಟೆಡ್ ವಿ ಸ್ಟ್ಯಾಂಡ್" ಎಂಬ ಘೋಷಣೆ ಮೊಳಗಿಸಲಾಗಿದೆ.

ದಿಲ್ಲಿಯಲ್ಲಿ ಜುಲೈ 18 ರಂದು ಕರೆದಿರುವ ಎನ್ ಡಿಎ ಸಭೆಯ ಜೊತೆಗೆ ಪ್ರತಿಪಕ್ಷಗಳ ಸಭೆ ನಡೆಯಲಿದೆ, ಎನ್ ಡಿಎ ಸಭೆಯಲ್ಲಿ ಕೆಲವು ಹೊಸ ಮಿತ್ರಪಕ್ಷಗಳು ಆಡಳಿತಾರೂಢ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಸೇರುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News