ನೂಹ್ ಹಿಂಸಾಚಾರ ಪ್ರಕರಣ: ರೋಹಿಂಗ್ಯ ನಿರಾಶ್ರಿತರ ಬಂಧನ

Update: 2023-08-07 16:41 GMT

ಹೊಸದಿಲ್ಲಿ: ನೂಹ್ ಹಿಂಸಾಚಾರಕ್ಕೆ ಸಂಬಂಧಿಸಿ ಹರ್ಯಾಣ ಪೊಲೀಸರು ಹಲವಾರು ರೊಹಿಂಗ್ಯಾ ನಿರಾಶ್ರಿತರನ್ನು ಬಂಧಿಸಿದ್ದಾರೆಂದು ವರದಿಯಾಗಿದೆ.

‘‘ಹಿಂಸಾಚಾರದಲ್ಲಿ ಭಾಗಿಯಾಗಿದ್ದವರ ಪಟ್ಟಿಯೊಂದನ್ನು ನಾವು ಗುರುತಿಸಿದ್ದೇವೆ ಹಾಗೂ ನಮ್ಮ ಬಳಿ ಇರುವ ಪುರಾವೆಗಳನ್ನು ಆಧರಿಸಿ, ತನಿಖಾ ತಂಡಗಳು ಅವರನ್ನು ಬಂಧಿಸಿವೆ’’ ಎಂದು ನೂಹ್ ಪೊಲೀಸ್ ಆಧೀಕ್ಷಕ ನರೇಂದರ್ ಬಿಜರ್ನಿಯಾ ತಿಳಿಸಿದ್ದಾರೆ.

ಈವರೆಗೆ ನೂಹ್ ನ ವಿವಿಧ ಪ್ರದೇಶಗಳ 50ಕ್ಕೂ ಹೆಚ್ಚು ಕಟ್ಟಡ ನಿರ್ಮಾಣಗಳನ್ನು ನೆಲಸಮಗೊಳಿಸಲಾಗಿದೆ.

ಅಕ್ರಮ ನಿರ್ಮಾಣಗಳನ್ನು ನೆಲಸಮಗೊಳಿಸುವ ನೆಪದಲ್ಲಿ ನೂಹ್ ಜಿಲ್ಲಾಡಳಿತವು ರೋಹಿಂಗ್ಯಾಗಳನ್ನು ಹೊರಬ್ಬುತ್ತಿದೆ ಎಂದು ಎನ್ಜಿಓ ಸಂಘಟನೆಯಾದ ರೋಹಿಂಗ್ಯಾ ಹ್ಯೂಮನ್ರೈಟ್ಸ್ ಇನಿಶಿಯೇಟಿವ್ ಟೀಕಿಸಿದೆ.

ಆದರೆ ಅಕ್ರಮ ಟ್ಟಡಗಳ ನೆಲಸಮ ಕಾರ್ಯಾಚರಣೆಯನ್ನು ಸಮರ್ಥಿಸಿರುವ ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರು, ಅಗತ್ಯ ಬಿದ್ದಾಗಲೆಲ್ಲಾ ಬುಲ್ಡೋಝರ್ ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.

ನೂಹ್ ನಲ್ಲಿ ಅಕ್ರಮ ಕಟ್ಟಡ ನೆಲಸಮ ಕಾರ್ಯಾಚರಣೆಯ ನಾಲ್ಕನೇ ದಿನವಾದ ರವಿವಾರ ಜಿಲ್ಲಾಡಳಿತವು ಸಹಾರಾ ಹೋಟೆಲ್ ಅನ್ನು ಕೆಡವಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News