#ReNEET ಟಿ ಶರ್ಟ್ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ ಪಕ್ಷೇತರ ಸಂಸದ ಪಪ್ಪು ಯಾದವ್

Update: 2024-06-25 15:23 GMT

ಪಪ್ಪು ಯಾದವ್ | screengrab: PC: X 

ಹೊಸದಿಲ್ಲಿ : ಪಕ್ಷೇತರ ಸಂಸದ ಪಪ್ಪು ಯಾದವ್ ಅವರು ಮಂಗಳವಾರ ಸಂಸತ್ನಲ್ಲಿ ಪ್ರಮಾಣ ವಚನ ಸ್ವೀಕರಿಡುವ ವೇಳೆ #ReNEET ಟಿ ಶರ್ಟ್ ಧರಿಸಿ ಗಮನ ಸೆಳೆದರು.

ಬಿಹಾರದ ಪೂರ್ನಿಯಾದ ಸಂಸದರಾಗಿರುವ ಅವರು ಪ್ರಮಾಣ ವಚನ ಸ್ವೀಕರಿಸಿ ಕೊನೆಗೆ, “ReNEET, ಬಿಹಾರ ವಿಶೇಷ ರಾಜ್ಯ ದರ್ಜೆ, ಸೀಮಾಂಚಲ ಝಿಂದಾಬಾದ್, ಮಾನವತಾವಾದ ಝಿಂದಾಬಾದ್, ಭೀಮ್ ಝಿಂದಾಬಾದ್, ಸಂವಿಧಾನ್ ಝಿಂದಾಬಾದ್” ಎಂದು ಮಾತು ಮುಗಿಸಿದರು.

ವೇದಿಕೆಯಲ್ಲೇ ಗರಂ ಆದ ಪಪ್ಪು ಯಾದವ್ :

ಎಲ್ಲಾ ರಾಜ್ಯಗಳ ಸಂಸದರಿಗೆ ಪ್ರಮಾಣ ವಚನ ಬೋಧನೆ ಮುಗಿಯುವಾಗ ಮಂಗಳವಾರ ಸಂಜೆ 6 ಗಂಟೆ ಕಳೆದಿತ್ತು. ಬಳಿಕ ನಿನ್ನೆ ಗೈರಾಗಿದ್ದ ಸಂಸದರಿಗೆ ಪ್ರಮಾಣ ವಚನಕ್ಕೆ ಕರೆಯುವಂತೆ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರು ಲೋಕಸಭಾ ಕಾರ್ಯದರ್ಶಿಗೆ ಹೇಳಿದರು.

ಅದರಂತೆ ತನ್ನ ಸರದಿಯಲ್ಲಿ ಬಂದ ಪಪ್ಪು ಯಾದವ್ ಪ್ರಮಾಣ ವಚನ ಸ್ವೀಕರಿಸಿದರು. ಕೊನೆಗೆ ReNEET, ಬಿಹಾರ ವಿಶೇಷ ರಾಜ್ಯ ದರ್ಜೆ, ಸೀಮಾಂಚಲ ಝಿಂದಾಬಾದ್, ಮಾನವತಾವಾದ ಝಿಂದಾಬಾದ್, ಭೀಮ್ ಝಿಂದಾಬಾದ್, ಸಂವಿಧಾನ್ ಝಿಂದಾಬಾದ್” ಎಂದು ಮಾತು ಮುಗಿಸಿದರು. ಪಪ್ಪು ಯಾದವ್ ಅವರು ReNEET ಎನ್ನುತ್ತಿದ್ದಂತೆ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರು, ಸಾಕು ಧನ್ಯವಾದಗಳು ಎಂದರು. ಆದರೆ ಸಮಾಧಾನದಿಂದಲೇ ಮಾತನಾಡಿದ ಪಪ್ಪು ಯಾದವ್ ತಮ್ಮ ಮಾತು ಮುಂದುವರೆಸಿದರು. ಹಂಗಾಮಿ ಸ್ಪೀಕರ್ ಮತ್ತೊಮ್ಮೆ “ಧನ್ಯವಾದಗಳು.. ಸಾಕು ನಿಲ್ಲಿಸಿ ಅಣ್ಣಾ” ಎಂದರು.

ತಮ್ಮ ಮಾತು ಮುಗಿದ ಬಳಿಕ ಹಂಗಾಮಿ ಸ್ಪೀಕರ್ ಪೀಠಕ್ಕೆ ತೆರಳಿದ ಪಪ್ಪು ಯಾದವ್ ಸ್ಪೀಕರ್ ಅವರ ಕೈಕುಲುಕಿದರು. ಬಳಿಕ ತಾವು ಮಾತನಾಡಿದ ಗದ್ದಲವೆಬ್ಬಿಸಿದ ಆಡಳಿತ ಪಕ್ಷದ ಸದಸ್ಯರತ್ತ “ನಾನು ಆರನೇ ಬಾರಿ ಸಂಸದನಾಗಿದ್ದೇನೆ, ನೀವು ನನಗೆ ಹೇಳಿಕೊಡಬೇಡಿ. ನೀವು ಕೃಪೆಯಿಂದ ಗೆದ್ದವರು. ನಾನು ಒಬ್ಬನೇ ನಿಂತು ಗೆದ್ದಿದ್ದೇನೆ” ಎನ್ನುತ್ತಲೇ ವೇದಿಕೆಯಿಂದ ನಿರ್ಗಮಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News