ಅಸ್ಸಾಂನಲ್ಲಿ 1,200 ಕ್ಕೂ ಹೆಚ್ಚು ಮದ್ರಸಾಗಳನ್ನು "ಮಿಡಲ್ ಇಂಗ್ಲೀಷ್ ಸ್ಕೂಲ್” ಎಂದು ಮರುನಾಮಕರಣ

Update: 2023-12-14 12:35 GMT

ಸಾಂದರ್ಭಿಕ ಚಿತ್ರ (PTI)

ಗುವಾಹಟಿ: ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರದ ಹಿಂದಿನ ನಿರ್ಧಾರದಂತೆ ಅಸ್ಸಾಂ ಶಿಕ್ಷಣ ಸಚಿವ ರನೋಜ್ ಪೆಗು ಅವರು ರಾಜ್ಯದಲ್ಲಿ 1,281 ಮದರಸಾಗಳನ್ನು ಮಿಡಲ್ ಇಂಗ್ಲೀಷ್ ಸ್ಕೂಲ್ ಗಳಾಗಿ ಮರುನಾಮಕರಣ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.

ಅಸ್ಸಾಂನ ಶಿಕ್ಷಣ ವ್ಯವಸ್ಥೆಯಲ್ಲಿ ಏಕರೂಪತೆ ಉತ್ತೇಜಿಸಲು ಈ ಕ್ರಮ ಕಾರ್ಯಗತಗೊಳಿಸಲಾಗಿದೆ ಎಂದು ಸಚಿವ ಪೆಗು ಹೇಳಿದ್ದಾರೆ.

"ಸೆಬಾ (ಸ್ಕೂಲ್ ಎಜುಕೇಶನ್ ಬೋರ್ಡ್ ಆಫ್ ಅಸ್ಸಾಂ) ಅಡಿಯಲ್ಲಿ ಎಲ್ಲಾ ಸರ್ಕಾರಿ ಮತ್ತು ಪ್ರಾಂತೀಯ ಮದರಸಾಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಿದ ಪರಿಣಾಮವಾಗಿ, ಅಧಿಸೂಚನೆಯ ಮೂಲಕ 1,281 ಮದರಸಾಗಳ ಹೆಸರನ್ನು ಮಿಡಲ್ ಇಂಗ್ಲೀಷ್ ಸ್ಕೂಲ್ ಗಳಾಗಿ ಬದಲಾಯಿಸಿದೆ" ಎಂದು ಪೆಗು X ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಹಿಂದೆ ರಾಜ್ಯದ ಎಲ್ಲಾ ಮದರಸಾಗಳನ್ನು ಮುಚ್ಚುವ ಉದ್ದೇಶವನ್ನು ವ್ಯಕ್ತಪಡಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಅಸ್ಸಾಂ ಸರ್ಕಾರವು ಕಳೆದ ವರ್ಷ ಎಲ್ಲಾ ಸರ್ಕಾರಿ ಮದ್ರಸಾಗಳನ್ನು ನಿಲ್ಲಿಸಿ ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲು ನಿರ್ಧರಿಸಿತು, ಇದು ವಿವಾದಗಳಿಗೆ ಕಾರಣವಾಗಿತ್ತು.

ಅಸ್ಸಾಂನ ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯವು ಸರ್ಕಾರಿ ಮತ್ತು ಪ್ರಾಂತೀಯ ಮದರಸಾಗಳನ್ನು ಶಾಲೆಗಳಾಗಿ ಪರಿವರ್ತಿಸುವ ಪ್ರಕ್ರಿಯೆ ನಡೆಸಿತು. ಅಸ್ಸಾಂ ಸರ್ಕಾರವು ಮದರಸಾಗಳನ್ನು ನಡೆಸಲು ರೂ. 500 ಕೋಟಿ ಖರ್ಚು ಮಾಡಿದೆ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News