ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: ಆರೋಪಿ ಮಹೇಶ್ ಕುಮಾವತ್ ಕಸ್ಟಡಿ ವಿಸ್ತರಣೆ

Update: 2023-12-23 17:05 GMT

ಸಾಂದರ್ಭಿಕ ಚಿತ್ರ | PTI  

ಹೊಸದಿಲ್ಲಿ: ಸಂಸತ್‌ನ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಮಹೇಶ್ ಕುಮಾವತ್‌ನ ಪೊಲೀಸ್ ಕಸ್ಟಡಿಯನ್ನು ಇಲ್ಲಿನ ನ್ಯಾಯಾಲಯ ಶನಿವಾರ ಜನವರಿ 5ರ ವರೆಗೆ ವಿಸ್ತರಿಸಿದೆ.

ದಿಲ್ಲಿ ಪೊಲೀಸರು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಕುಮಾವತ್‌ನ ಕಸ್ಟಡಿಯನ್ನು ವಿಸ್ತರಿಸಿದರು. ಸಂಪೂರ್ಣ ಪಿತೂರಿಯನ್ನು ಬೆಳಕಿಗೆ ತರಲು ಆತನ ವಿಚಾರಣೆ ನಡೆಸುವ ಅಗತ್ಯತೆ ಇದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕಿಂತ ಮೊದಲು ಸರಕಾರಿ ವಕೀಲರು,‘‘ಆರೋಪಿಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಯಸಿದ್ದರು. ಆದುದರಿಂದ ಅವರು ತಮ್ಮ ಕಾನೂನು ಬಾಹಿರ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಬಹುದು’’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

‘‘ಈ ದಾಳಿಯ ಹಿಂದಿನ ವಾಸ್ತವ ಉದ್ದೇಶ ಹಾಗೂ ಶತ್ರು ದೇಶ, ಭಯೋತ್ಪಾದಕ ಸಂಘಟನೆಗಳೊಂದಿಗೆ ಅವರ ನಂಟನ್ನು ಪತ್ತೆ ಮಾಡಲು ಕಸ್ಟಡಿ ಅಗತ್ಯವಾಗಿದೆ’’ ಎಂದು ಸರಕಾರಿ ವಕೀಲರು ವಾದಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News