ಅಹ್ಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ

Update: 2024-05-07 05:28 GMT

ಪ್ರಧಾನಿ ನರೇಂದ್ರ ಮೋದಿ (PTI)

ಅಹ್ಮದಾಬಾದ್:‌ ಮೂರನೇ ಹಂತದ ಲೋಕಸಭಾ ಚುನಾವಣೆ ಇಂದು ನಡೆಯುತ್ತಿದ್ದು ಗುಜರಾತ್‌ನ ಅಹ್ಮದಾಬಾದ್‌ನ ನಿಶಾನ್‌ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯೊಂದರಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮತ ಚಲಾಯಿಸಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪ್ರಧಾನಿ ಮೋದಿ ಎಲ್ಲಾ ಮತದಾರರು ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.

ಮತದಾನ ಮಾಡಿದ ಶಾಯಿ ಗುರುತಿನ ಬೆರಳನ್ನು ಮತದಾನ ಕೇಂದ್ರದ ಹೊರಗೆ ಪ್ರದರ್ಶಿಸಿ ಮಾತನಾಡಿದ ಪ್ರಧಾನಿ, “ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ, ಇಲ್ಲೇ ನಾನು ನಿಯಮಿತವಾಗಿ ಮತದಾನ ಮಾಡುತ್ತೇನೆ, ಇಲ್ಲಿ ಅಮಿತ್‌ ಭಾಯಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ,” ಎಂದು ಹೇಳಿದರು.

ನಂತರ ಟ್ವೀಟ್‌ ಮಾಡಿದ ಪ್ರಧಾನಿ “ಮೊದಲ ಎರಡು ಹಂತದ ಚುನಾವಣೆಗಳನ್ನು ಬಹುತೇಕ ಹಿಂಸಾಮುಕ್ತವಾಗಿ ನಡೆಸಿದ್ದಕ್ಕಾಗಿ ನಾನು ಚುನಾವಣಾ ಆಯೋಗವನ್ನು ಅಭಿನಂದಿಸುತ್ತೇನೆ. ಮತದಾರ ಸ್ನೇಹಿಯಾಗಿ ಚುನಾವಣೆ ನಡೆಸಿದ್ದಕ್ಕಾಗಿ ನಾನು ಆಯೋಗವನ್ನು ಅಭಿನಂದಿಸುತ್ತೇನೆ,” ಎಂದು ಹೇಳಿದ್ದಾರೆ. ಭಾರತದ ಮತದಾನ ಪ್ರಕ್ರಿಯೆ ಜಗತ್ತಿನ ಪ್ರಜಾಪ್ರಭುತ್ವಗಳಿಗೆ ಮಾದರಿಯಾಗಿದೆ ಎಂದೂ ಪ್ರಧಾನಿ ಹೇಳಿದರು.

ಮತದಾನ ಕೇಂದ್ರದ ಹೊರಗೆ ನೆರೆದಿದ್ದವರೊಂದಿಗೆ ಮಾತನಾಡಿ ಕೈಬೀಸಿದ ಪ್ರಧಾನಿ ಜನರೊಂದಿಗೆ ಕೈಕುಲುಕಿದರು ಮತ್ತು ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News