ಪ್ರಧಾನಿ ಮೋದಿ ನಿಜವಾದ ಹಿಂದೂವಲ್ಲ, ತಾಯಿ ಮೃತಪಟ್ಟಾಗ ಕೇಶಮುಂಡನ ಮಾಡಿಸಿಕೊಂಡಿರಲಿಲ್ಲ: ಲಾಲು ಪ್ರಸಾದ್ ಯಾದವ್
Update: 2024-03-04 10:49 GMT
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರವಿವಾರ ಟೀಕಾಪ್ರಹಾರ ನಡೆಸಿದ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್, ಅವರ ತಾಯಿ ಹೀರಾಬೆನ್ 2022ರಲ್ಲಿ ನಿಧನರಾದಾಗ ಅವರು ಕೇಶಮುಂಡನ ಮಾಡಿಸಿಕೊಂಡಿರಲಿಲ್ಲ, ಹೀಗಾಗಿ ಅವರು ನಿಜವಾದ ಹಿಂದೂ ಅಲ್ಲ ಎಂದು ಪ್ರತಿಪಾದಿಸಿದರು.
ಹಿಂದೂ ಸಂಪ್ರದಾಯಗಳ ಪ್ರಕಾರ ಪೋಷಕರು ತೀರಿಕೊಂಡಾಗ ಗಂಡುಮಕ್ಕಳು ಕೇಶಮುಂಡನ ಮಾಡಿಸಿಕೊಳ್ಳಬೇಕು.
ಪಾಟ್ನಾದ ಗಾಂಧಿ ಮೈದಾನದಲ್ಲಿ ‘ಜನ ವಿಶ್ವಾಸ ಮಹಾ ರ್ಯಾಲಿ’ಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಲಾಲು ಯಾದವ್ ಮೋದಿ ವಿರುದ್ಧ ಈ ಟೀಕೆಯನ್ನು ಮಾಡಿದರು.
ಸ್ವಜನ ಪಕ್ಷಪಾತ ಕುರಿತು ಹೇಳಿಕೆಗಾಗಿಯೂ ಮೋದಿ ವಿರುದ್ಧ ದಾಳಿ ನಡೆಸಿದ ಯಾದವ್, ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಈ ವಿಷಯದಲ್ಲಿ ಅವಹೇಳನಕ್ಕೆ ಗುರಿಯಾಗುತ್ತಾರೆ. ಮೋದಿಯವರಿಗೆ ಸ್ವಂತ ಕುಟುಂಬವಿಲ್ಲ ಎಂದು ಹೇಳಿದರು.