“ಭರವಸೆಯ ಬೆಳಕು”: ಸುಪ್ರೀಂ ಕೋರ್ಟ್‌ ತೀರ್ಪು ಬೆನ್ನಲ್ಲೇ ಪ್ರಧಾನಿ ಮೋದಿ ಪ್ರತಿಕ್ರಿಯೆ

Update: 2023-12-11 09:03 GMT

ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ವಿಧಿ 370 ರದ್ದುಗೊಳಿಸಿದ ಸರ್ಕಾರದ ಕ್ರಮದ ಕುರಿತಂತೆ ಸುಪ್ರೀಂ ಕೋರ್ಟ್‌ ಇಂದು ನೀಡಿದ ಐತಿಹಾಸಿಕ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಜನರಿಗೆ “ಆಶಾವಾದ, ಪ್ರಗತಿ ಮತ್ತು ಏಕತೆಯನ್ನು ಪ್ರತಿನಿಧಿಸುವ ಘೋಷಣೆಯಾಗಿದೆ,” ಎಂದು ಪ್ರಧಾನಿ ಹೇಳಿದ್ದಾರೆ.

ನಿಮ್ಮ ಆಶಾವಾದಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದೂ ಪ್ರಧಾನಿ ತಮ್ಮ ಟ್ವೀಟ್‌ನಲ್ಲಿ ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಜನರಿಗೆ ಭರವಸೆ ನೀಡಿದ್ದಾರೆ.

“ವಿಧಿ 370 ರದ್ದತಿ ಕುರಿತಂತೆ ಇಂದಿನ ಸುಪ್ರೀಂ ಕೋರ್ಟ್‌ ತೀರ್ಪು ಐತಿಹಾಸಿಕ ಮತ್ತು ಆಗಸ್ಟ್‌ 5, 2019ರಂದು ಭಾರತದ ಸಂಸತ್ತು ಕೈಗೊಂಡ ತೀರ್ಮಾನವನ್ನು ಸಂವಿಧಾನಿಕವಾಗಿ ಎತ್ತಿ ಹಿಡಿದಿದೆ,” ಎಂದು ಪ್ರಧಾನಿ ಹೇಳಿದ್ದಾರೆ.

“ನಿಮ್ಮ ಕನಸುಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಮತ್ತು ಪ್ರಗತಿಯ ಪ್ರತಿಫಲಗಳು ನಿಮಗೆ ತಲುಪುವಂತೆ ಹಾಗೂ ವಿಧಿ 370 ಯಿಂದಾಗಿ ತೊಂದರೆಗೊಳಗಾದ ದುರ್ಬಲ ವರ್ಗಗಳಿಗೂ ಎಲ್ಲಾ ಪ್ರಯೋಜನಗಳು ದೊರೆಯುವಂತಾಗಲು ನಾವು ಬದ್ಧರಾಗಿದ್ದೇವೆ,” ಎಂದು ಪ್ರಧಾನಿ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದು ಕೇವಲ ಕಾನೂನಾತ್ಮಕ ತೀರ್ಪಲ್ಲ, ಇದು ಭರವಸೆಯ ಬೆಳಕು, ಉಜ್ವಲ ಭವಿಷ್ಯದ ಆಶ್ವಾಸನೆ ಮತ್ತು ಹೆಚ್ಚು ಬಲಿಷ್ಠವಾದ ಮತ್ತು ಏಕತೆಯ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ನಿರ್ಧಾರದ ಪ್ರತೀಕವಾಗಿದೆ,” ಎಂದು ಪ್ರಧಾನಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News