ಪ್ರಣವ್ ಮುಖರ್ಜಿ ಸ್ಮಾರಕ ನಿರ್ಮಾಣಕ್ಕೆ ಕೇಂದ್ರದ ನಿರ್ಧಾರ

Update: 2025-01-07 16:42 GMT

ಪ್ರಣವ್ ಮುಖರ್ಜಿ | PC : PTI 

ಹೊಸದಿಲ್ಲಿ: ಭಾರೀ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ಮಾರಕಕ್ಕಾಗಿ ನಿವೇಶನದ ಆಯ್ಕೆ ಪ್ರಕ್ರಿಯೆಯ ನಡುವೆಯೇ ಕೇಂದ್ರ ಸರಕಾರವು ಅವರ ಮಾಜಿ ಕಾಂಗ್ರೆಸ್ ಸಹೋದ್ಯೋಗಿ ಹಾಗೂ ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿಯವರಿಗಾಗಿ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಿದೆ.

ತಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು, ತನ್ನ ತಂದೆಗಾಗಿ ಸ್ಮಾರಕ ನಿರ್ಮಿಸುವ ಸರಕಾರದ ನಿರ್ಧಾರಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾಗಿ ಮುಖರ್ಜಿಯವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ಮಂಗಳವಾರ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ರಾಷ್ಟ್ರೀಯ ಸ್ಮತಿ ಸ್ಥಳ’ದಲ್ಲಿ ಸ್ಮಾರಕವನ್ನು ನಿರ್ಮಿಸುವುದಾಗಿ ತಿಳಿಸಿರುವ ಸರಕಾರದ ಪತ್ರವನ್ನು ಹಂಚಿಕೊಂಡಿರುವ ಅವರು, ಸ್ಮಾರಕ ನಿರ್ಮಾಣಕ್ಕಾಗಿ ತನ್ನ ಕುಟುಂಬವು ಕೇಳಿಕೊಂಡಿರಲಿಲ್ಲ. ಹೀಗಾಗಿ ಸರಕಾರದ ನಿರ್ಧಾರವು ಕುಟುಂಬಕ್ಕೆ ಖುಷಿ ನೀಡಿದೆ' ಎಂದು ಹೇಳಿದ್ದಾರೆ.

2012-2017ರ ನಡುವೆ ಭಾರತದ ರಾಷ್ಟ್ರಪತಿಯಾಗಿದ್ದ ಮುಖರ್ಜಿ 2020ರಲ್ಲಿ ನಿಧನರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News