ಜೆನೆರಿಕ್ ಔಷಧಿ ಬರೆಯಿರಿ ಇಲ್ಲವೇ ಕ್ರಮ ಎದುರಿಸಿ: ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಎಚ್ಚರಿಕೆ

Update: 2023-08-12 17:54 GMT

ಹೊಸದಿಲ್ಲಿ: ಎಲ್ಲಾ ವೈದ್ಯರು ಜೆನೆರಿಕ್ ಔಷಧಿಗಳನ್ನೇ ಶಿಫಾರಸು ಮಾಡಬೇಕು, ತಪ್ಪಿದಲ್ಲಿ ಅವರಿಗೆ ದಂಡವಿಧಿಸಲಾಗುವುದೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಶನಿವಾರ ನಿರ್ದೇಶನ ನೀಡಿದೆ. ಒಂದು ವೇಳೆ ಈ ಸೂಚನೆಯ ಉಲ್ಲಂಘನೆಯನ್ನು ಪುನಾರವರ್ತಿಸಿದಲ್ಲಿ ಅವರ ವೈದ್ಯಕೀಯ ವೃತ್ತಿಯ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ.

ವೈದ್ಯರು ಜೆನೆರಿಕ್ ಔಷಧಿಗಳನ್ನೇ ಶಿಫಾರಸು ಮಾಡಬೇಕೆಂಬ ನಿಯಮ ಪ್ರಸಕ್ತ ಜಾರಿಯಲ್ಲಿದೆಯಾದರೂ, ಆದರೆ ಅದನ್ನು ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸುವುದಾಗಿ ಘೋಷಿಸಿರುವುದು ಇದೇ ಮೊದಲ ಸಲವಾಗಿದೆ.

ಜೆನೆರಿಕ್ ಔಷಧಿಗಳ ಬ್ರಾಂಡ್ ಹೆಸರುಗಳನ್ನು ಶಿಫಾರಸು ಮಾಡುವುದನ್ನು ಕೈಬಿಡುವಂತೆಯೂ ಎನ್ಎಂಸಿ ತನ್ನ ನೋಂದಾಯಿತ ವೈದ್ಯಕೀಯ ಪ್ರಾಕ್ಟಿಶನರ್ಗಳ ವೃತ್ತಿಪರ ನಡವಳಿಕೆಗೆ ಸಂಬಂಧಿಸಿದ ನಿಯಮಾವಳಿಗಳಲ್ಲಿ ತಿಳಿಸಿದೆ.

‘‘ಜೆನೆರಿಕ್ ಔಷಧಿಗಳು ಬ್ರಾಂಡೆಡ್ ಔಷಧಿಗಳಿಗಿಂತ ಶೇ.30ರಿಂದ ಶೇ.80ರಷ್ಟು ಅಗ್ಗವಾದುದಾಗಿದೆ. ಆದುದರಿಂದ ಜೆನೆರಿಕ್ ಔಷಧಿಗಳನ್ನು ಶಿಪಾರಸು ಮಾಡುವುದರಿಂದ ಜಸಾಮಾನ್ಯರ ಆರೋಗ್ಯಪಾನಾ ವೆಚ್ಚಗಳು ಕಡಿಮೆಯಾಗಲಿವೆ ಹಾಗೂ ಗುಣಮಟ್ಟದ ಶುಶ್ರೂಷೆಯ ಲಭ್ಯತೆಯನ್ನು ಹೆಚ್ಚಿಸಲಿದೆ’’ ಎಂದು ಎನ್ಎಂಸಿ ಪ್ರಕಟಣೆ ತಿಳಿಸಿದೆ.

‘‘ಪ್ರತಿಯೊಬ್ಬ ನೋಂದಾಯಿತ ವೈದ್ಯಕೀಯ ಪ್ರಾಕ್ಟಿಶನರ್, ಜೆನೆರಿಕ್ ಹೆಸರುಗಳ ಔಷಧಿಗಳನ್ನು ಶಿಫಾರಸು ಮಾಡಬೇಕು. ಔಷಧಿಗಳ ಜೆನೆರಿಕ್ ಹೆಸರುಗಳನ್ನು ಲಿಖಿತವಾಗಿ ಬರೆಯಬೇಕು ಹಾಗೂ ಅನಗತ್ಯವಾದ ಔಷಧಿಗಳನ್ನು ಹಾಗೂ ಅವೈಚಾರಿಕವಾದ ಪಿಕ್ಸೆಡ್-ಡೋಸ್ ಕಾಂಬಿನೇಶನ್ನ ಮಾತ್ರೆಗಳನ್ನು ನೀಡುವುದನ್ನು ತಪ್ಪಿಸಬೇಕು’’ ಎಂದು ಎನ್ಎಂಸಿ ನಿಯಾವಳಿಯು ತಿಳಿಸಿದೆ.

ಜೆನೆರಿಕ್ ಔಷಧಿ ಎಂದರೇನು?

ರೋಗಲಕ್ಷಣ ನಿವಾರಣೆ, ಅದರ ಚಿಕಿತ್ಸೆ, ಉಪಚಾರಣೆ ಹಾಗೂ ರೋಗನಿರೋಧಕ ಶಕ್ತಿಗಾಗಿ ಉಪಯೋಗಿಸುವ ರಾಸಾಯನಿಕ ವಸ್ತು ಅಥವಾ ಔಷಧವನ್ನು ಜೆನೆರಿಕ್ ಔಷಧಿಗಳೆಂದು ಕರೆಯಲಾಗುತ್ತದೆ. ಇದು ಗುಣಮಟ್ಟ ಹಾಗೂ ಕಾರ್ಯಕ್ಷಮತೆಯಲ್ಲಿ ಬ್ರಾಂಡ್ ಮಾಡಿದ ಔಷಧಿಗಳಿಗೆ ಸರಿಸಮಾನವಾಗಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News