ತಮಿಳುನಾಡು | ಸರಕಾರಿ ಆಸ್ಪತ್ರೆಯಲ್ಲಿ ಕತ್ತು ಕೊಯ್ದುಕೊಂಡ ರೇಬೀಸ್ ಸೋಂಕಿತ

Update: 2025-03-12 18:18 IST
ತಮಿಳುನಾಡು | ಸರಕಾರಿ ಆಸ್ಪತ್ರೆಯಲ್ಲಿ ಕತ್ತು ಕೊಯ್ದುಕೊಂಡ ರೇಬೀಸ್ ಸೋಂಕಿತ

ಸಾಂದರ್ಭಿಕ ಚಿತ್ರ | indiatoday

  • whatsapp icon

ಚೆನ್ನೈ : ತಮಿಳುನಾಡಿನ ಕೊಯಮತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ರೇಬೀಸ್ ಸೋಂಕಿತ ವ್ಯಕ್ತಿಯೋರ್ವ ತನ್ನ ಕತ್ತು ಕೊಯ್ದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಒಡಿಶಾ ಮೂಲದ ರಾಮ್ ಚಂದರ್(35) ಎಂಬಾತನಿಗೆ ಕೆಲವು ದಿನಗಳ ಹಿಂದೆ ಹುಚ್ಚು ನಾಯಿ ಕಚ್ಚಿತ್ತು. ಅವರ ಸ್ಥಿತಿ ಹದಗೆಟ್ಟಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು.

ರೋಗವು ಹೆಚ್ಚಾಗಿ ಉಲ್ಭಣಗೊಳ್ಳುತ್ತಿದಂತೆ ಅವರು ಆಕ್ರಮಣಕಾರಿಯಾಗಿ ವರ್ತಿಸಿದರು. ಇದು ಕೊನೆಯ ಹಂತದ ರೇಬೀಸ್‌ನ ಲಕ್ಷಣಗಳಾಗಿವೆ. ಅವರು ಆಸ್ಪತ್ರೆಯಲ್ಲಿ ಗಾಜಿನ ಫಲಕವನ್ನು ಒಡೆದುಹಾಕಿ, ಗಾಜಿನ ತುಂಡುಗಳಿಂದ ಕತ್ತು ಕೊಯ್ದುಕೊಂಡರು. ದೈಹಿಕ ದ್ರವಗಳ ಮೂಲಕ ರೇಬೀಸ್ ಹರಡುವ ಅಪಾಯವಿದ್ದ ಕಾರಣ ಆಸ್ಪತ್ರೆಯ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿಲ್ಲ, ಬದಲಿಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ಅಧಿಕಾರಿಗಳು ಆಗಮಿಸುವ ವೇಳೆಗೆ ರಾಮ್ ಚಂದರ್ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ಕೆಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೇಬೀಸ್ ಸೋಂಕಿತನ ಅಂತಿಮ ಕ್ಷಣಗಳ ವೈರಲ್ ದೃಶ್ಯಗಳು ರೇಬೀಸ್‌ ಅಪಾಯಗಳು ಮತ್ತು ಪ್ರಾಣಿಗಳ ಕಡಿತದ ನಂತರ ಸಕಾಲಿಕ ವ್ಯಾಕ್ಸಿನೇಷನ್‌ಗಳ ಅಗತ್ಯವನ್ನು ಹೇಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News