ರಾಜಸ್ಥಾನ | ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಕೌನ್ಸಿಲರ್‌ಗಳನ್ನು ಗೋಮೂತ್ರದಿಂದ ಶುದ್ಧೀಕರಣ!

Update: 2024-09-27 17:02 GMT

PC : PTI 

ಜೈಪುರ : ಜೈಪುರ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಕೌನ್ಸಿಲರ್‌ಗಳನ್ನು ಗೋಮೂತ್ರ ಹಾಗೂ ಗಂಗಾಜಲದಿಂದ ಶುದ್ಧೀಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಮೇಯರ್ ಮುನೇಶ್ ಗುರ್ಜರ್ ಅವರನ್ನು ಪದಚ್ಯುತಗೊಳಿಸಿದ ಬಳಿಕ ಕಾಂಗ್ರೆಸ್‌ನ 7 ಕೌನ್ಸಿಲರ್‌ಗಳು ಹಾಗೂ ಓರ್ವ ಪಕ್ಷೇತರನ ಬೆಂಬಲದಿಂದ ಕುಸಮ್ ಯಾದವ್ ಅವರನ್ನು ಮೇಯರ್ ಆಗಿ ಬಿಜೆಪಿ ಆಯ್ಕೆ ಮಾಡಿದೆ. ಅಲ್ಲದೆ, ಈ ಎಲ್ಲಾ 8 ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕುಸಮ್ ಯಾದವ್ ಅವರು ಮೇಯರ್ ಆಗಿ ಅಧಿಕಾರ ಸ್ವೀಕರಿಸುವ ಮುನ್ನ ಗಂಗಾಜಲ ಹಾಗೂ ಗೋಮೂತ್ರದಿಂದ ಕೌನ್ಸಿಲರ್‌ಗಳ ಶುದ್ಧೀಕರಣ ಪ್ರಕ್ರಿಯೆ ನಡೆದಿದೆ. ಈ ಶುದ್ದೀಕರಣ ಪ್ರಕ್ರಿಯೆಯ ನೇತೃತ್ವವನ್ನು ಬಿಜೆಪಿ ಶಾಸಕ ಬಾಲಮುಕುಂದ ಆಚಾರ್ಯ ವಹಿಸಿದ್ದರು.

ಆಚರಣೆಯಲ್ಲಿ ಶುದ್ದೀಕರಣ ಪ್ರಕ್ರಿಯೆಯ ಭಾಗವಾಗಿ ಕೌನ್ಸಿಲರ್‌ಗಳು ಹಾಗೂ ಅಧಿಕಾರಿಗಳು ಸಾಂಕೇತಿಕವಾಗಿ ಗಂಗಾಜಲ ಹಾಗೂ ಗೋಮೂತ್ರ ಕೂಡ ಸೇವಿಸಿದ್ದಾರೆ.

ಈ ಮೂಲಕ ಪಾಲಿಕೆಯನ್ನು ಭ್ರಷ್ಟಾಚಾರದಿಂದ ಶುದ್ದೀಕರಿಸುವ ಕಾರ್ಯ ಸಂಪನ್ನವಾಗಿದೆ ಎಂದು ಬಾಲಮುಕುಂದ ಆಚಾರ್ಯ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News