ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಗಡೀಪಾರು

Update: 2024-03-27 04:37 GMT

ರಾಜೀವ್‌ ಗಾಂಧಿ Photo: PTI

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ಗಾಂಧಿಯವರ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ತಾತ್ಕಾಲಿಕ ಪ್ರಯಾಣಕ್ಕೆ ಅಗತ್ಯ ದಾಖಲೆಗಳನ್ನು ಶ್ರೀಲಂಕಾದ ಉಪ ಹೈಕಮಿಷನ್ ಸಿದ್ಧಪಡಿಸುತ್ತಿದೆ ಎಂದು ತಮಿಳುನಾಡು ಸರ್ಕಾರ ಚೆನ್ನೈ ಹೈಕೋರ್ಟ್ ಗೆ ಮಂಗಳವಾರ ಮಾಹಿತಿ ನೀಡಿದೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಾದ ಶ್ರೀಹರನ್ ಅಲಿಯಾಸ್ ಮುರುಗನ್, ರಾಬರ್ಟ್ ಪಯಾಸ್ ಮತ್ತು ಜಯಕುಮಾರ್ ಅವರನ್ನು ಒಂದು ವಾರದ ಒಳಗಾಗಿ ಶ್ರೀಲಂಕಾಗೆ ಗಡೀಪಾರು ಮಾಡಲಾಗುತ್ತದೆ. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಗಡೀಪಾರು ಆದೇಶ ಹೊರಡಿಸಿದ ತಕ್ಷಣ ಆರೋಪಿಗಳ ಗಡೀಪಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಆರ್.ಮುನಿಯಪ್ಪರಾಜ್ ಅವರು, ನ್ಯಾಯಮೂರ್ತಿಗಳಾದ ಆರ್.ಸುರೇಶ್ ಕುಮಾರ್ ಮತ್ತು ಕೆ.ಕುಮಾರೇಶ್ ಬಾಬು ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.

ಫೋಟೊ ಹೊಂದಿದ ಗುರುತಿನ ಪ್ರಮಾಣ ನೀಡುವಂತೆ ಕೋರಿ ಮುರುಗನ್ ಮಾಡಿಕೊಂಡ ಮನವಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಈ ಮಾಹಿತಿ ನೀಡಲಾಯಿತು.

"ರಿಟ್ ಅರ್ಜಿಯಲ್ಲಿ ಕೋರಿರುವಂತೆ ಈ ಹಂತದಲ್ಲಿ ಪ್ರತ್ಯೇಕ ಗುರುತಿನ ಚೀಟಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಹಂತದಲ್ಲಿ ರಿಟ್ ಅರ್ಜಿಗೆ ಸಂಬಂಧಿಸಿ ಪ್ರತ್ಯೇಕ ಆದೇಶ ಅನಗತ್ಯ ಎನ್ನುವುದು ನಮ್ಮ ಭಾವನೆ" ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಶ್ರೀಲಂಕಾ ಹೈಕಮಿಷನ್ ಈಗಾಗಲೇ ಪ್ರಯಾಣ ದಾಖಲೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಮುರುಗನ್ ಮನವಿಯನ್ನು ವಿಲೇವಾರಿ ಮಾಡಲಾಗಿದೆ. ಇದರ ಆಧಾರದಲ್ಲಿ ಚೆನ್ನೈ ಎಫ್ಆರ್ ಆರ್ ಓ‌ ದಿಂದ ಗಡೀಪಾರು ಆದೇಶ ಬಂದ ತಕ್ಷಣ ಆತನನ್ನು ಆತನ ದೇಶಕ್ಕೆ ಗಡೀಪಾರು ಮಾಡಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News