ಶರದ್ ಪವಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡು ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ

Update: 2023-08-01 08:09 GMT

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಪುಣೆಯಲ್ಲಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಿಲಕ್ ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸಿರುವುದು ನನಗೆ ಗೌರವ ತಂದಿದೆ ಎಂದ ಅವರು, ನಮಾಮಿ ಗಂಗೆ ಯೋಜನೆಗೆ ತಮ್ಮ ಬಹುಮಾನದ ಮೊತ್ತ 1 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದರು.

ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಶರದ್ ಪವಾರ್ ಅವರೊಂದಿಗೆ ಪ್ರಧಾನಿ ವೇದಿಕೆ ಹಂಚಿಕೊಂಡರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವು ರಾಜ್ಯದಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರಕಾರವನ್ನು ಸೇರುವುದರೊಂದಿಗೆ ಪವಾರ್ ಅವರ ಪಕ್ಷವು ಇತ್ತೀಚೆಗೆ ವಿಭಜನೆಯಾಯಿತು.

ಮೋದಿ ಅವರು ಇಂದು ಪುಣೆಯ ದಗ್ದುಶೇತ್ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಪುಣೆ ಭೇಟಿಯನ್ನು ಆರಂಭಿಸಿದ್ದರು.

ಶಿವಾಜಿನಗರ ಪೊಲೀಸ್ ಪ್ರಧಾನ ಕಚೇರಿಯ ಪರೇಡ್ ಮೈದಾನದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯೊಂದಿಗೆ ಪಿಂಪ್ರಿ-ಚಿಂಚ್ವಾಡ್ ಮತ್ತು ಪುಣೆ ನಡುವಿನ ಪ್ರಯಾಣವನ್ನು ಸುಲಭ ಮತ್ತು ವೇಗವಾಗಿ ಮಾಡುವ ಹೊಸ ಮೆಟ್ರೋ ರೈಲು ಮಾರ್ಗ ವಿಸ್ತರಣೆಯನ್ನು ಮೋದಿ ಅವರು ಉದ್ಘಾಟಿಸಲಿದ್ದಾರೆ.

ಪ್ರತಿಪಕ್ಷಗಳ INDIA ಮೈತ್ರಿಕೂಟ, ಮಣಿಪುರ ಸೇರಿದಂತೆ ವಿವಿಧ  ವಿಚಾರಗಳಿಗೆ ಸಂಬಂಧಿಸಿ ಮೋದಿ ಪುಣೆ ಭೇಟಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿತು.

. ‘ಮೋದಿ ಅವರಿಗೆ ಈ ಪ್ರಶಸ್ತಿ ನೀಡಬಾರದಿತ್ತು’ ಎಂದು ‘ನಿರ್ಭಯ್ ಬಾನೊ’ಗೆ ಸಂಬಂಧಿಸಿದ ಸಾಮಾಜಿಕ ಕಾರ್ಯಕರ್ತ ವಿಶಂಭರ್ ಚೌಧರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News