ಬಾಯ್ತಪ್ಪಿನಿಂದ ಆದ ಪ್ರಮಾದ: '7 ದಿನಗಳಲ್ಲಿ ಸಿಎಎ ಜಾರಿ' ಎಂದ್ದಿದ್ದ ಬಿಜೆಪಿ ಸಂಸದರಿಂದ ಸಮಜಾಯಿಷಿ

Update: 2024-02-05 16:35 GMT

ಹೊಸದಿಲ್ಲಿ: ಏಳು ದಿನಗಳೊಳಗೆ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೊಳಿಸಲಾಗುವುದು ಎಂದು ಕರೆದ ವಾರ ಹೇಳಿಕೆ ನೀಡಿ ಸುದ್ದಿಯಲ್ಲಿದ್ದ ಬಿಜೆಪಿಯ ಸಂಸದ ಶಂತನು ಠಾಕುರ್‌, ಇದೀಗ ಉಲ್ಟಾ ಹೊಡೆದಿದ್ದಾರೆ ಹಾಗೂ ತಾವು ಬಾಯ್ತಪ್ಪಿನಿಂದ ಹಾಗೆ ಹೇಳಿದ್ದಾಗಿ ತಿಳಿಸಿದ್ದಾರೆ. ಠಾಕುರ್‌ ಅವರು ಮತುವಾ ಸಮುದಾಯದ ಮುಖಂಡರಾಗಿದ್ದು ಅವರ ಸಮುದಾಯ ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಗೊಳಿಸಬೇಕೆಂದು ಬಹಳ ವರ್ಷಗಳಿಂದ ಆಗ್ರಹಿಸುತ್ತಿದೆ.

ಪೌರತ್ವ ತಿದ್ದುಪಡಿ ಕಾಯಿದೆಗೆ ಸಂಬಂಧಿಸಿದ ನಿಯಮಗಳನ್ನು ಒಂದು ವಾರದೊಳಗೆ ರೂಪಿಸಲಾಗುವುದು ಎಂಬುದು ತಮ್ಮ ಅರ್ಥವಾಗಿತ್ತು ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

“ಏಳು ದಿನಗಳೊಳಗಾಗಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ ದೇಶಾದ್ಯಂತ ಜಾರಿಗೊಳಿಸಲಾಗುವುದು,” ಎಂದು ಪಶ್ಚಿಮ ಬಂಗಾಳದ ಕುಲ್ಪಿ ಎಂಬಲ್ಲಿನ ಸಾರ್ವಜನಿಕ ಸಭೆಯೊಂದರಲ್ಲಿ ಠಾಕುರ್‌ ಜನವರಿ 28ರಂದು ಹೇಳಿದ ನಂತರ ಬಿಜೆಪಿ ಹೈಕಮಾಂಡ್‌ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News