ಸಣ್ಣ ಸಮಸ್ಯೆಯಾದರೂ NDA ಸರಕಾರ ಪತನಗೊಳ್ಳಲಿದೆ : ರಾಹುಲ್ ಗಾಂಧಿ

Update: 2024-06-18 08:36 GMT

Photo : PTI

ಹೊಸದಿಲ್ಲಿ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭಾ ಸಂಖ್ಯಾಬಲವು ತುಂಬಾ ಚಂಚಲವಾಗಿದೆ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಸಣ್ಣ ಸಮಸ್ಯೆಯಾದರೂ ಸರಕಾರ ಪತನವಾಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ.

Financial Times ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ರಾಹುಲ್ ಗಾಂಧಿ, “ಪ್ರಾಥಮಿಕವಾಗಿ ಒಂದು ಮಿತ್ರ ಪಕ್ಷ ಬೇರೆ ದಾರಿ ಹಿಡಿಯಬೇಕಿದೆ” ಎಂದೂ ಹೇಳಿದ್ದಾರೆ. ಇದರೊಂದಿಗೆ ಯಾರ ಹೆಸರನ್ನೂ ಉಲ್ಲೇಖಿಸದೆ, ಎನ್ಡಿಎ ಮೈತ್ರಿಕೂಟದ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ ಹಾಗೂ ಮೋದಿ ಪಾಳಯದಲ್ಲಿ ತೀವ್ರ ಅಸಮಾಧಾನವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

2014 ಹಾಗೂ 2019ರಲ್ಲಿ ನರೇಂದ್ರ ಮೋದಿ ಪರ ಕೆಲಸ ಮಾಡಿದ್ದ ವಿಷಯವು ಈ ಬಾರಿ ನಡೆಯದೆ ಇರುವುದರಿಂದ, ಆಡಳಿತಾರೂಢ ಮೈತ್ರಿ ಸರಕಾರ ಪರದಾಡಲಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಆಗಿರುವ ಲಾಭಗಳ ಕುರಿತು, “ಭಾರತೀಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯಾಗಿದೆ” ಎಂದು ಅವರು ವ್ಯಾಖ್ಯಾನಿಸಿದ್ದಾರೆ. “ಮೋದಿ ಪರಿಕಲ್ಪನೆ ಹಾಗೂ ಮೋದಿ ವರ್ಚಸ್ಸನ್ನು ನಾಶಗೊಳಿಸಲಾಗಿದೆ” ಎಂದೂ ಅವರು ಹೇಳಿಕೊಂಡಿದ್ದಾರೆ.

ಸೌಜನ್ಯ : Financial Times

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News