ಅಸ್ಸಾಂ ಸರಕಾರದಿಂದ ಸ್ಥಳೀಯ ಮುಸ್ಲಿಮ್ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆ

Update: 2023-10-03 15:18 GMT

ಹಿಮಂತ ಬಿಸ್ವ ಶರ್ಮಾ | Photo: PTI 

ಗುವಾಹಟಿ : ರಾಜ್ಯದ ಐದು ಸ್ಥಳೀಯ ಮುಸ್ಲಿಮ್ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ನಡೆಸುವುದಾಗಿ ಅಸ್ಸಾಂ ಸರಕಾರವು ಮಂಗಳವಾರ ಪ್ರಕಟಿಸಿದೆ. ಸಮೀಕ್ಷೆಯು ಈ ಸಮುದಾಯಗಳ ಏಳಿಗೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ ಎಂದು ಅದು ಹೇಳಿದೆ.

ಈ ಸಂಬಂಧ ರಾಜ್ಯ ಸಚಿವಾಲಯದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, ರಾಜ್ಯದ ಗೋರಿಯಾ,ಮೋರಿಯಾ,ದೇಶಿ,ಸೈಯದ್ ಮತ್ತು ಜೋಲ್ಹಾ ಮುಸ್ಲಿಮ್ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಮುಖ್ಯಮಂತ್ರಿಗಳ ಕಚೇರಿಯು X ಪೋಸ್ಟ್ ನಲ್ಲಿ ತಿಳಿಸಿದೆ.

ಸಮೀಕ್ಷೆಯ ಫಲಿತಾಂಶಗಳು ಸ್ಥಳೀಯ ಅಲ್ಪಸಂಖ್ಯಾತರ ಸಮಗ್ರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಏಳಿಗೆಯನ್ನು ಗುರಿಯಾಗಿಟ್ಟುಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರಕಾರಕ್ಕೆ ಮಾರ್ಗದರ್ಶನ ನೀಡಲಿವೆ ಎಂದು ಅದು ಹೇಳಿದೆ.

ಬಿಹಾರದ ನಿತೀಶ್ ಕುಮಾರ್ ಸರಕಾರವು ತನ್ನ ಬಹು ನಿರೀಕ್ಷಿತ ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಿದ ಬೆನ್ನಿಗೇ ಅಸ್ಸಾಂ ಸರಕಾರದ ಈ ನಿರ್ಧಾರ ಹೊರಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News