ಸಂಸತ್ತಿನ ಹೊರಗೆ ರಾತ್ರಿ ಇಡೀ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳು

Update: 2023-07-25 05:14 GMT

ಹೊಸದಿಲ್ಲಿ: ಮುಂಗಾರು ಅಧಿವೇಶನಕ್ಕೆ ಮೂರನೇ ದಿನವೂ ಅಡ್ಡಿಪಡಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳ ಸಂಸದರ ಗುಂಪು ಸಂಸತ್ ಭವನದ ಮಹಾತ್ಮ ಗಾಂಧಿ ಪ್ರತಿಮೆ ಎದುರು ರಾತ್ರಿ ಇಡೀ ಧರಣಿ ನಡೆಸಿದರು.

ಮಣಿಪುರದಲ್ಲಿ ಎರಡು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಸಮಗ್ರವಾದ ಹೇಳಿಕೆಯನ್ನು ನೀಡುವಂತೆ ಹೊಸದಾಗಿ ರೂಪುಗೊಂಡ ಪ್ರತಿಪಕ್ಷ ಗುಂಪು ' 'INDIA' 'ವು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತಿದೆ.

‘ಭಾರತಕ್ಕಾಗಿ ಮಣಿಪುರ’ ಎಂಬ ಫಲಕಗಳನ್ನು ಹಿಡಿದು, ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ಕಾಂಗ್ರೆಸ್ ಸಂಸದರು ರಾತ್ರಿ 11 ಗಂಟೆಗೆ ಮೌನ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿತು. ಅವರು ಅಲ್ಲಿ ರಾತ್ರಿ ಕಳೆದಿದ್ದಾರೆ.

, ಮಣಿಪುರ ಬಿಕ್ಕಟ್ಟಿನ ಕುರಿತು ಉಭಯ ಸದನಗಳಲ್ಲಿ ಪ್ರಧಾನಿ ಮೋದಿಯವರು "ಸಮಗ್ರ ಹೇಳಿಕೆ" ನೀಡಬೇಕೆಂಬ 'INDIA' ಬೇಡಿಕೆಯನ್ನು ಅಂಗೀಕರಿಸಲು ಸರಕಾರದ "ನಿರಂತರ ನಿರಾಕರಣೆ"ಯಿಂದಾಗಿ ಸಂಸತ್ತು ಮೂರನೇ ದಿನವೂ ಕಾರ್ಯನಿರ್ವಹಿಸಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಮಣಿಪುರದ ಪರಿಸ್ಥಿತಿಯನ್ನು ಚರ್ಚಿಸಲು ಹಲವು ವಿರೋಧ ಪಕ್ಷದ ಸಂಸದರು ಮುಂದೂಡಿಕೆಗೆ ನೋಟಿಸ್ ನೀಡಿದ್ದರು.

ಯಾವುದೇ ಸಮಯದ ನಿರ್ಬಂಧವಿಲ್ಲದೆ ಎಲ್ಲಾ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡುವ ಚರ್ಚೆಯನ್ನು ಪ್ರತಿಪಕ್ಷಗಳು ಬಯಸುತ್ತವೆ ಮತ್ತು ಮುಂಗಾರು ಅಧಿವೇಶನ ಗುರುವಾರ ಆರಂಭವಾದಾಗಿನಿಂದ ಈ ವಿಷಯದ ಬಗ್ಗೆ ಪ್ರತಿಭಟನೆಗಳನ್ನು ನಡೆಸುತ್ತಿವೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸರಕಾರವು ಸಂವೇದನಾಶೀಲವಾಗಿದೆ ಎಂದು ಆರೋಪಿಸಿದರು.

ಪ್ರಧಾನಿ ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ, ಆ ಹೇಳಿಕೆಯ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ, ನೀವು ಹೊರಗೆ ಮಾತನಾಡುತ್ತಿದ್ದೀರಿ ಆದರೆ ಒಳಗೆ ಮಾತನಾಡುತ್ತಿಲ್ಲ, ಇದು ಸಂಸತ್ತಿಗೆ ಮಾಡಿದ ಅವಮಾನವಾಗಿದೆ, ಇದು ಗಂಭೀರ ವಿಷಯವಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News