ಜೆಇಇ ಮೈನ್, ನೀಟ್ ಪರೀಕ್ಷೆ ದಿನಾಂಕಗಳಲ್ಲಿ ಬದಲಾವಣೆ ಇಲ್ಲ

Update: 2024-03-17 02:38 GMT

Photo:PTI

ಹೊಸದಿಲ್ಲಿ: ಲೋಕಸಭೆಗೆ ಸುಧೀರ್ಘ ಚುನಾವಣೆ ನಡೆಯುವ ನಡುವೆಯೇ ಹಲವು ಪ್ರಮುಖ ಪರೀಕ್ಷೆಗಳ ದಿನಾಂಕ ನಿಗದಿಯಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಜೆಇಇ (ಮೈನ್), ನೀಟ್-ಯುಜಿ ಮತ್ತು ಸಿಯುಇಟಿ-ಯುಜಿ ಪರೀಕ್ಷೆ ಈ ಹಿಂದೆ ನಿಗದಿಪಡಿಸಿದ ದಿನಾಂಕಗಳಂದೇ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಕೇಂದ್ರೀಯ ಅನುದಾನಿತ ಕಾಲೇಜುಗಳ ಪ್ರವೇಶಕ್ಕಾಗಿ ಇರುವ ಜೆಇಇ (ಮೈನ್) ಪರೀಕ್ಷೆ ಮತ್ತು ಐಐಟಿ ಪ್ರವೇಶಕ್ಕೆ ಅರ್ಹತಾ ಪರೀಕ್ಷೆ (ಜೆಇಇ-ಅಡ್ವಾನ್ಸ್ಡ್) ಪರೀಕ್ಷೆಗಳು ಏಪ್ರಿಲ್ 4 ಮತ್ತು 15ರ ನಡುವೆ ನಡೆಯಲಿದೆ. ಇದು ಚುನಾವಣಾ ವೇಳಾಪಟ್ಟಿಯ ದಿನಾಂಕದಿಂದ ಹೊರಗಿರುತ್ತವೆ.

ನೀಟ್-ಯುಜಿ ಮೇ 5ರಂದು ನಡೆಯಲಿದ್ದು, ಸಿಯುಇಟಿ-ಯುಜಿ ಮೇ 15 ಮತ್ತು 31ರಂದು ಈಗಾಗಲೇ ಅಧಿಸೂಚನೆ ಹೊರಡಿಸಿದಂತೆ ನಡೆಯಲಿದೆ. ವೈದ್ಯಕೀಯ, ದಂತವಿಜ್ಞಾನ ಮತ್ತು ಸಂಬಂಧಿತ ಆರೋಗ್ಯ ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ ಮೇ 5ರಂದು ನಡೆಯಲಿದ್ದು, ಆ ದಿನ ಹಾಗೂ ಹಿಂದಿನ ದಿನ ಯಾವುದೇ ಮತದಾನ ಇರುವುದಿಲ್ಲ ಎಂದು ಎನ್ ಟಿಎ ಮಹಾನಿರ್ದೇಶಕರ ಸುಬೋಧ್ ಕುಮಾರ್ ಸಿಂಗ್ ಹೇಳಿದ್ದಾರೆ.

ಸಿಯುಇಟಿ-ಯುಜಿಗೆ ಆನ್ ಲೈನ್ ನೋಂದಣಿ ನಡೆಯುತ್ತಿದ್ದು, ಪರೀಕ್ಷಾ ಗವಾಕ್ಷಿಯನ್ನು ಎನ್ ಟಿಎ ಬದಲಾಯಿಸುವುದಿಲ್ಲ. ನಿಖರವಾದ ದಿನಾಂಕವನ್ನು ಸದ್ಯದಲ್ಲೇ ನಿಗದಿಪಡಿಸಲಿದೆ. ಸಿಯುಇಟಿ-ಯುಜಿಗೆ ನಾವು ಮೇ 15 ರಿಂದ ಮೇ 31 ದಿನಾಂಕ ಮೀಸಲಿಟ್ಟಿದ್ದೇವೆ. ಅಂತಿಮ ದಿನಾಂಕವನ್ನು ನೋಂದಣಿ ಪೂರ್ಣಗೊಂಡ ಬಳಿಕ ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News