ಮಹಾರಾಷ್ಟ್ರ: ಕುತೂಹಲಕ್ಕೆ ಕಾರಣವಾದ ಸಿಎಂ ದೇವೇಂದ್ರ ಫಡ್ನವಿಸ್ ಮತ್ತು ಉದ್ಧವ್ ಠಾಕ್ರೆ ಭೇಟಿ
Update: 2024-12-17 18:36 IST

PC : X/@ShivSenaUBT_
ಮುಂಬೈ: ಶಿವಸೇನಾ (ಯುಬಿಟಿ) ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮಂಗಳವಾರ ನಾಗ್ಪುರದ ವಿಧಾನ ಭವನದಲ್ಲಿ ಭೇಟಿಯಾಗಿದ್ದಾರೆ.
ಠಾಕ್ರೆ ಅವರೊಂದಿಗೆ ಶಿವಸೇನೆ (ಠಾಕ್ರೆ ಬಣದ) ನಾಯಕರಾದ ಆದಿತ್ಯ ಠಾಕ್ರೆ, ಅನಿಲ್ ಪರಬ್ ಮತ್ತು ವರುಣ್ ಸರ್ದೇಸಾಯಿ ಇದ್ದರು.
ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ನಾಗಪುರಕ್ಕೆ ಆಗಮಿಸಿರುವ ಠಾಕ್ರೆ, ಸಂಜೆ ಬಳಿಕ ಶಿವಸೇನೆ (ಯುಬಿಟಿ) ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.