ರಾಘವ್ ಚಡ್ಡಾರ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಲಾಗುತ್ತದೆಯೆ? ನ್ಯಾಯಾಲಯ ಹೇಳಿದ್ದೇನು?

Update: 2023-10-06 18:10 GMT

Photo: PTI

ಹೊಸ ದಿಲ್ಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾಗೆ ನ್ಯಾಯಾಲಯದಲ್ಲಿ ತೀವ್ರ ಹಿನ್ನಡೆಯಾಗಿದ್ದು, ಮಂಜೂರಾತಿಯು ರದ್ದುಗೊಂಡ ನಂತರ ಸರ್ಕಾರಿ ಬಂಗಲೆಯನ್ನು ಆಕ್ರಮಿಸಿಕೊಂಡು ಮುಂದುವರಿಯುವುದಕ್ಕೆ ಅವರಿಗೆ ಯಾವುದೇ ಹಕ್ಕಿಲ್ಲ ಎಂದು ದಿಲ್ಲಿ ನ್ಯಾಯಾಲಯವೊಂದು ಆದೇಶಿಸಿದೆ. ರಾಘವ್ ಚಡ್ಡಾರಿಗೆ ಮಂಜೂರು ಮಾಡಿದ್ದ ಮಧ್ಯಂತರ ತಡೆಯನ್ನು ನ್ಯಾಯಾಲಯವು ತೆರವುಗೊಳಿಸಿದ್ದು, ಇದರರ್ಥ, ರಾಜ್ಯಸಭಾ ಕಾರ್ಯಾಲಯವು ಅವರ ಬಂಗಲೆಯನ್ನು ತೆರವುಗೊಳಿಸುವಂತೆ ಅವರಿಗೆ ಯಾವ ಕ್ಷಣದಲ್ಲಾದರೂ ಸೂಚಿಸಬಹುದಾಗಿದೆ ಎಂದು ndtv.com ವರದಿ ಮಾಡಿದೆ.

ನ್ಯಾಯಾಲಯದ ಆದೇಶದ ನಂತರ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ನಾಯಕರೂ ಆದ ರಾಘವ್ ಚಡ್ಡಾ, ಬಂಗಲೆ ಮಂಜೂರಾತಿಯನ್ನು ರದ್ದುಗೊಳಿಸಿರುವುದು ನಿರಂಕುಶವಾಗಿದ್ದು, ಈ ಹಿಂದೆಂದೂ ಈ ರೀತಿ ನಡೆದಿರಲಿಲ್ಲ. ಇದನ್ನು ಬಿಜೆಪಿಯ ರಾಜಕೀಯ ಉದ್ದೇಶಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಯನ್ನು ಹೇರಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷದ ಜುಲೈ ತಿಂಗಳಲ್ಲಿ ರಾಘವ್ ಚಡ್ಡಾರಿಗೆ ಆರನೇ ದರ್ಜೆಯ ಬಂಗಲೆಯನ್ನು ಮಂಜೂರು ಮಾಡಲಾಗಿತ್ತು. ಆದರೆ, ಅವರು ತಮಗೆ ಅದಕ್ಕಿಂತ ವಿಸ್ತಾರವಾದ ಏಳನೇ ದರ್ಜೆಯ ಬಂಗಲೆಯನ್ನು ಮಂಜೂರು ಮಾಡುವಂತೆ ರಾಜ್ಯಸಭಾಧ್ಯಕ್ಷರಿಗೆ ಮನವಿ ಮಾಡಿದ್ದರು. ಅವರ ಮನವಿಯನ್ನು ಮನ್ನಿಸಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಅವರಿಗೆ ಏಳನೇ ದರ್ಜೆಯ ಬಂಗಲೆಯನ್ನು ಮಂಜೂರು ಮಾಡಲಾಗಿತ್ತು. ಆದರೆ, ಈ ವರ್ಷದ ಮಾರ್ಚ್ ತಿಂಗಳಲ್ಲಿ, ಮೊದಲ ಬಾರಿಯ ಸಂಸದರು ಆ ದರ್ಜೆಯ ಬಂಗಲೆಗೆ ಅರ್ಹರಲ್ಲ ಎಂದು ವಾದಿಸಿದ್ದ ರಾಜ್ಯಸಭಾ ಕಾರ್ಯಾಲಯವು, ಅವರ ಬಂಗಲೆಯ ಮಂಜೂರಾತಿಯನ್ನು ರದ್ದುಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News